ADVERTISEMENT

ಜೋಯಾಲುಕ್ಕಾಸ್‌ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 15:35 IST
Last Updated 27 ಸೆಪ್ಟೆಂಬರ್ 2020, 15:35 IST
ಜೋಯಾಲುಕ್ಕಾಸ್‌ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರ ಕಚೇರಿಯ ಕಾನ್ಸುಲೇಟ್‌ ಜನರಲ್‌ ಡಾ. ಅಮನ್‌ ಪುರಿ, ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜಾಯ್‌ ಅಲುಕ್ಕಾಸ್‌ ಮತ್ತಿತರು ಇದ್ದರು
ಜೋಯಾಲುಕ್ಕಾಸ್‌ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರ ಕಚೇರಿಯ ಕಾನ್ಸುಲೇಟ್‌ ಜನರಲ್‌ ಡಾ. ಅಮನ್‌ ಪುರಿ, ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜಾಯ್‌ ಅಲುಕ್ಕಾಸ್‌ ಮತ್ತಿತರು ಇದ್ದರು   

ದುಬೈ: ಚಿನ್ನಾಭರಣಗಳವ್ಯಾಪಾರಿಗಳಾದ ಜೋಯಾಲುಕ್ಕಾಸ್‌ ಸಮೂಹದ ಇತಿಹಾಸವನ್ನು ದಾಖಲಿಸುವ ‘ಎ ಗ್ಲಿಟರಿಂಗ್‌ ಸಕ್ಸೆಸ್‌ ಸ್ಟೋರಿ’ ಕಾಫಿ ಟೇಬಲ್‌ ಪುಸ್ತಕವನ್ನು ದುಬೈನಲ್ಲಿ ಬಿಡುಗಡೆ ಮಾಡಲಾಯಿತು.

ಭಾರತೀಯ ರಾಯಭಾರ ಕಚೇರಿಯ ಕಾನ್ಸುಲೇಟ್‌ ಜನರಲ್‌ ಡಾ. ಅಮನ್‌ ಪುರಿ ಪುಸ್ತಕ ಅನಾವರಣ ಮಾಡಿದರು. ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜಾಯ್‌ ಅಲುಕ್ಕಾಸ್‌ ಅವರು ಅಮನ್‌ ಪುರಿ ಅವರಿಗೆ ಮೊದಲ ಪ್ರತಿಯನ್ನು ನೀಡಿದರು. ಸಮೂಹದ ಸ್ಥಾಪಕ ಜಾಯ್‌ ಅಲುಕ್ಕಾಸ್‌ ಅವರ ತಂದೆ ಅಲುಕ್ಕಾ ಜೋಸೆಫ್‌ ವರ್ಗೀಸ್‌ ಅವರಿಗೆ ಈ ಕೃತಿ ಸಮರ್ಪಿಸಲಾಗಿದೆ.

‘1987ರಲ್ಲಿ ಯುಎಇನಲ್ಲಿ ಮೊದಲ ಆಭರಣ ಮಳಿಗೆ ಆರಂಭವಾಯಿತು. ಇಂದು ನಾವು ವಿಶ್ವದ 11 ದೇಶಗಳಲ್ಲಿ ಹರಡಿರುವ ಅಂತರರಾಷ್ಟ್ರೀಯ ಬ್ರ್ಯಾಂಡ್‌ ಆಗಿ ಬೆಳೆದಿದ್ದೇವೆ’ ಎಂದು ಜಾಯ್‌ ಅಲುಕ್ಕಾಸ್‌ ಹೇಳಿದರು.

ADVERTISEMENT

ಜಾಯ್‌ ಅಲುಕ್ಕಾಸ್‌ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಜಾನ್‌ಪಾಲ್‌ ಅಲುಕ್ಕಾಸ್‌, ಜಾಸ್ಸಿಮ್‌ ಮೊಹಮ್ಮದ್ ಇಬ್ರಾಹಿಂ ಅಲ್‌ ಹಸಾವಿ ಅಲ್ತಾಮಿ ಮತ್ತು ಮುಸ್ತಾಫಾ ಮೊಹಮ್ಮದ್ ಅಹ್ಮದ್‌ ಅಲ್‌ ಶರೀಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.