ಬೆಂಗಳೂರು: ಜೋಯಾಲುಕ್ಕಾಸ್‌ನಿಂದ ಮೇ 25ರ ವರೆಗೆ ಚಿನ್ನ ವಿನಿಮಯ ಮೇಳ ಹಮ್ಮಿಕೊಳ್ಳಲಾಗಿದೆ.
ಗ್ರಾಹಕರು ವಿನಿಮಯ ಮಾಡಿಕೊಳ್ಳುವ ಹಳೆಯ ಚಿನ್ನಕ್ಕೆ ಪ್ರತಿ ಗ್ರಾಂಗೆ ಹೆಚ್ಚುವರಿಯಾಗಿ ₹100 ಪಾವತಿಸಲಾಗುವುದು. ಇದರಿಂದ ಹೊಸ ಚಿನ್ನಾಭರಣ ಖರೀದಿಗೆ ಹೆಚ್ಚಿನ ಅನುಕೂಲವಾಗಲಿದೆ. ಗ್ರಾಹಕರು ವಿವಿಧ ವಿನ್ಯಾಸದ ಆಭರಣಗಳ ಖರೀದಿಗೆ ಸಹಕಾರಿಯಾಗಲಿದೆ ಎಂದು ಜೋಯಾಲುಕ್ಕಾಸ್ ತಿಳಿಸಿದೆ.
‘ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು ಕಂಪನಿಯ ಉದ್ದೇಶವಾಗಿದೆ. ಹಳೆಯ ಚಿನ್ನ ವಿನಿಮಯದ ಮೂಲಕ ಹೊಸ ಆಭರಣಗಳ ಖರೀದಿಗೆ ವೇದಿಕೆ ಕಲ್ಪಿಸುವ ಈ ಮೇಳದ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದು’ ಎಂದು ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೋಯ್ ಅಲುಕ್ಕಾಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.