ADVERTISEMENT

ಹಳೆಯ ಚಿನ್ನಾಭರಣಕ್ಕೆ ಗರಿಷ್ಠ ಮೌಲ್ಯ: ಜೋಯಾಲುಕ್ಕಾಸ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 13:30 IST
Last Updated 24 ಜೂನ್ 2020, 13:30 IST
ಜೋಯಾಲುಕ್ಕಾಸ್
ಜೋಯಾಲುಕ್ಕಾಸ್   

ಬೆಂಗಳೂರು:ಗ್ರಾಹಕರು ಯಾವುದೇ ಆಭರಣ ಮಳಿಗೆಯಲ್ಲಿ ಖರೀದಿಸಿರುವ ಹಳೆಯ ಚಿನ್ನಾಭರಣಗಳಿಗೆ ತನ್ನ ಮಳಿಗೆಯಲ್ಲಿ ಗರಿಷ್ಠ ಮೌಲ್ಯ ನೀಡುವುದಾಗಿಜೋಯಾಲುಕಾಸ್‌ ಭರವಸೆ ನೀಡಿದೆ.

ಹಳೆಯ ಚಿನ್ನಾಭರಣಗಳನ್ನು 916 ಬಿಐಎಸ್‌ ಹಾಲ್‌ಮಾರ್ಕ್‌ ಚಿನ್ನಾಭರಣದೊಂದಿಗೆ ಗರಿಷ್ಠ ಮೌಲ್ಯಕ್ಕೆ ವಿನಿಮಯ ಮಾಡಿಕೊಳ್ಳಬಹುದು ಅಥವಾ ನಗದನ್ನು ಪಡೆಯಬಹುದು ಎಂದು ಹೇಳಿದೆ.

ಗ್ರಾಹಕರಿಗೆ ಇಷ್ಟವಾಗುವ ಚಿನ್ನಾಭರಣವನ್ನು ಬೆಲೆಯ ಶೇ 10ರಷ್ಟನ್ನು ಮುಂಗಡವಾಗಿ ಪಾವತಿಸಿ ಬುಕಿಂಗ್‌ ಮಾಡುವ ಅವಕಾಶವನ್ನೂ ಕಲ್ಪಿಸಿದೆ.

ADVERTISEMENT

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಅನ್ವಯ ಎಲ್ಲಾ ಮಳಿಗೆಗಳಲ್ಲಿಯೂ ಆರೋಗ್ಯಕ್ಕೆ ಸಂಬಂಧಿಸಿದ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿದೆ.

ಆನ್‌ಲೈನ್‌ ಮೂಲಕ ಖರೀದಿಗೆwww.joyalukkas.comಗೆ ಭೇಟಿ ನೀಡಬಹುದು. ಗಿಫ್ಟ್‌ ಕಾರ್ಡ್‌, ಇ–ವೋಚರ್ಸ್‌ ಇತ್ಯಾದಿಗಳನ್ನೂ ಸಂಪರ್ಕರಹಿತವಾಗಿ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.