ADVERTISEMENT

ಕಲ್ಯಾಣ್‌ ಜುವೆಲರ್ಸ್‌ ಅಧ್ಯಕ್ಷರಾಗಿ ಮಾಜಿ ಸಿಎಜಿ ವಿನೋದ್‌ ರಾಯ್‌ ನೇಮಕ

ಪಿಟಿಐ
Published 28 ಮಾರ್ಚ್ 2022, 11:37 IST
Last Updated 28 ಮಾರ್ಚ್ 2022, 11:37 IST
ವಿನೋದ್‌ ರಾಯ್‌
ವಿನೋದ್‌ ರಾಯ್‌   

ನವದೆಹಲಿ: ಕಲ್ಯಾಣ್‌ ಜುವೆಲರ್ಸ್‌ ಇಂಡಿಯಾ ಕಂಪನಿಯು ಮಾಜಿ ಮಹಾಲೇಖಪಾಲ (ಸಿಎಜಿ) ವಿನೋದ್‌ ರಾಯ್‌ ಅವರನ್ನು ಅಧ್ಯಕ್ಷ ಮತ್ತು ಸ್ವತಂತ್ರ ಕಾರ್ಯನಿರ್ವಾಹಕೇತರ ನಿರ್ದೇಶಕರನ್ನಾಗಿ ನೇಮಿಸಿದೆ.

ಈ ನೇಮಕಕ್ಕೆ ಷೇರುದಾರರು ಮತ್ತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಒಪ್ಪಿಗೆ ದೊರೆಯಬೇಕಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಟಿ.ಎಸ್‌. ಕಲ್ಯಾಣ್‌ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಕಂಪನಿಯ ಆಡಳಿತ ಮಂಡಳಿಯಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.