ADVERTISEMENT

ಕಲ್ಯಾಣ್‌ ಜುವೆಲರ್ಸ್‌ ಐಪಿಒಗೆ ‘ಸೆಬಿ’ ಒಪ್ಪಿಗೆ

ಪಿಟಿಐ
Published 19 ಅಕ್ಟೋಬರ್ 2020, 15:03 IST
Last Updated 19 ಅಕ್ಟೋಬರ್ 2020, 15:03 IST
ಕಲ್ಯಾಣರಾಮನ್‌
ಕಲ್ಯಾಣರಾಮನ್‌   

ನವದೆಹಲಿ: ಕಲ್ಯಾಣ್‌ ಜುವೆಲರ್ಸ್‌ ಇಂಡಿಯಾ ಲಿಮಿಟೆಡ್‌ನ ಷೇರುಗಳನ್ನುಸಾರ್ವಜನಿಕರಿಗೆ ಮುಕ್ತವಾಗಿಸುವ (ಐಪಿಒ) ಪ್ರಸ್ತಾವನೆಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಒಪ್ಪಿಗೆ ನೀಡಿದೆ.

₹ 1,000 ಕೋಟಿವರೆಗಿನ ಹೊಸ ಷೇರುಗಳು ಹಾಗೂ ₹ 750 ಕೋಟಿ ಮೊತ್ತದ ಆಫರ್‌ ಫಾರ್ ಸೇಲ್‌ (ಒಎಫ್‌ಸಿ) ಸೇರಿ ಒಟ್ಟಾರೆ ₹ 1,750 ಕೋಟಿ ಮೊತ್ತದ ಐಪಿಒ ಇದಾಗಿದೆ.

ಕಲ್ಯಾಣ್‌ ಜುವೆಲರ್ಸ್‌ನ ಸ್ಥಾಪಕ ಟಿ.ಎಸ್‌. ಕಲ್ಯಾಣರಾಮನ್‌ ಅವರು ₹ 250 ಕೋಟಿ ಮೊತ್ತದ ಷೇರುಗಳನ್ನು ಮಾರಲಿದ್ದಾರೆ. ಹೈಡೆಲ್‌ ಇನ್‌ವೆಸ್ಟ್‌ಮೆಂಟ್‌ ಲಿಮಿಟೆಡ್‌ ₹ 500 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಲಿದೆ. ಕಲ್ಯಾಣ್ ಜುವೆಲರ್ಸ್‌ ಆಗಸ್ಟ್‌ 15ರಂದು ಐಪಿಒ ಸಂಬಂಧ ಸೆಬಿಗೆ ಕರಡು ಪತ್ರ ಸಲ್ಲಿಸಿತ್ತು.

ADVERTISEMENT

ಐಪಿಒ ಮೂಲಕ ಸಂಗ್ರಹಿಸುವ ಮೊತ್ತವನ್ನು ದುಡಿಯುವ ಬಂಡವಾಳವಾಗಿ ಹಾಗೂ ಕಾರ್ಪೊರೇಟ್‌ ಉದ್ದೇಶಗಳಿಗೆ ಬಳಸಿಕೊಳ್ಳುವುದಾಗಿ ಕಂಪನಿ ತಿಳಿಸಿದೆ. ಜೂನ್‌ ಅಂತ್ಯದ ವೇಳೆಗೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆ 107 ಷೋರೂಂಗಳನ್ನು ಕಂಪನಿ ಹೊಂದಿತ್ತು.

ಆಕ್ಸಿಸ್‌ ಕ್ಯಾಪಿಟಲ್‌, ಸಿಟಿಗ್ರೂಪ್‌ ಗ್ಲೋಬಲ್‌ ಮಾರ್ಕೆಟ್ಸ್‌ ಇಂಡಿಯಾ, ಐಸಿಐಸಿಐ ಸೆಕ್ಯುರಿಟೀಸ್‌ ಮತ್ತು ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಈ ಐಪಿಒ ನಿರ್ವಹಣೆ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.