ಹೂಡಿಕೆ
(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)
ಬೆಂಗಳೂರು: 2021–22ನೇ ಹಣಕಾಸು ವರ್ಷದಿಂದ 2024–25ನೇ ಹಣಕಾಸು ವರ್ಷದವರೆಗಿನ ಅವಧಿಯಲ್ಲಿ ರಾಜ್ಯವು ಒಟ್ಟು ₹12 ಲಕ್ಷ ಕೋಟಿಗಿಂತ ಹೆಚ್ಚಿನ ಹೊಸ ಹೂಡಿಕೆ ಪ್ರಸ್ತಾವಗಳನ್ನು ಸ್ವೀಕರಿಸಿದೆ.
ರಾಜ್ಯದಲ್ಲಿರುವ ಪ್ರಗತಿಪರವಾದ ಹೂಡಿಕೆ ವಾತಾವರಣ ಇದಕ್ಕೆ ಕಾರಣ ಎಂದು ಎಂಎಸ್‌ಎಂಇ ರಫ್ತು ಉತ್ತೇಜನಾ ಮಂಡಳಿ ನಡೆಸಿರುವ ಅಧ್ಯಯನವು ಹೇಳಿದೆ.
ರಾಜ್ಯದಲ್ಲಿನ ಹೂಡಿಕೆ ವಾತಾವರಣ, ಮಹತ್ವದ ಮೂಲಸೌಕರ್ಯ ಯೋಜನೆಗಳು, ಮುನ್ನೋಟವಿರುವ ನೀತಿಗಳು, ರಾಜ್ಯದಲ್ಲಿನ ಪ್ರತಿಭೆಯು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು (ಎಫ್‌ಡಿಐ) ಆಕರ್ಷಿಸುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
‘ಈ ಅವಧಿಯಲ್ಲಿ ₹12 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಹೊಸ ಹೂಡಿಕೆ ಯೋಜನೆಗಳನ್ನು ಘೋಷಿಸಲಾಗಿದೆ. ಈ ಪೈಕಿ ₹1.40 ಲಕ್ಷ ಕೋಟಿ ಮೌಲ್ಯದ ಯೋಜನೆಗಳ ಅನುಷ್ಠಾನವು ಪೂರ್ಣಗೊಂಡಿದೆ. ₹9.49 ಲಕ್ಷ ಕೋಟಿ ಮೌಲ್ಯವ ವಿವಿಧ ಯೋಜನೆಗಳು ಅನುಷ್ಠಾನದ ಬೇರೆ ಬೇರೆ ಹಂತಗಳಲ್ಲಿ ಇವೆ’ ಎಂದು ಮಂಡಳಿಯ ಅಧ್ಯಕ್ಷ ಡಿ.ಎಸ್. ರಾವತ್ ಹೇಳಿದ್ದಾರೆ.
ರಾಜ್ಯದ ಎಂಎಸ್‌ಎಂಇ ವಲಯವು ಬೆಳವಣಿಗೆಯನ್ನು ದಾಖಲಿಸುತ್ತಿದೆ. ರಾಜ್ಯದಲ್ಲಿ ಎಂಎಸ್‌ಎಂಇ ವಲಯದ 8.5 ಲಕ್ಷಕ್ಕಿಂತ ಹೆಚ್ಚು ಘಟಕಗಳಿವೆ. ಇವು ಸರಿಸುಮಾರು 70 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿವೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.