ADVERTISEMENT

ಕರೂರ್ ವೈಶ್ಯ ಬ್ಯಾಂಕ್‌ ಮೂಲಕ ಜಿಎಸ್‌ಟಿ ಪಾವತಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 16:19 IST
Last Updated 18 ಆಗಸ್ಟ್ 2022, 16:19 IST

ಬೆಂಗಳೂರು: ಕರೂರ್‌ ವೈಶ್ಯ ಬ್ಯಾಂಕ್‌ ಗ್ರಾಹಕರು ಜಿಎಸ್‌ಟಿ ಸಂಬಂಧಿತ ಪಾವತಿಗಳನ್ನು ಬ್ಯಾಂಕ್‌ ಮೂಲಕ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಕರೂರ್‌ ವೈಶ್ಯ ಬ್ಯಾಂಕ್‌ಗೆ ಜಿಎಸ್‌ಟಿ ಸಂಬಂಧಿತ ಪಾವತಿಗಳ ಸೇವೆ ಒದಗಿಸಲು ಮಾನ್ಯತೆ ದೊರೆತಿದೆ. ಪಾವತಿಗಳನ್ನು ಬ್ಯಾಂಕ್‌ನ ಇಂಟರ್ನೆಟ್‌ ಬ್ಯಾಂಕಿಂಗ್ ಸೌಲಭ್ಯ ಹಾಗೂ ಕೌಂಟರ್ ಮೋಡ್ ಮೂಲಕ ಮಾಡಬಹುದು.

‘ಜಿಎಸ್‌ಟಿ ಪಾವತಿ ಸೇವೆ ದೊರೆಯುತ್ತಿರುವುದು ನಮ್ಮ ಗ್ರಾಹಕರ ದೀರ್ಘಕಾಲದ ಬೇಡಿಕೆಯನ್ನು ಪೂರೈಸಲಿದೆ. ಇದು ಚಾಲ್ತಿ ಖಾತೆಗಳ ತೆರೆಯುವಿಕೆ ಅಭಿಯಾನವನ್ನು ಬಲಗೊಳಿಸಲು ನೆರವಾಗಲಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಬಿ. ರಮೇಶ್ ಬಾಬು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.