ನವದೆಹಲಿ: ಕಿಯಾ ಇಂಡಿಯಾ ಕಂಪನಿಯು ಸೆಲ್ಟೋಸ್ ಮತ್ತು ಕಾರೆನ್ಸ್ ಕಾರಿನ ಬೆಲೆಯನ್ನು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಶೇ 2ರವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಕಂಪನಿಯ ಭಾರತದ ಮುಖ್ಯಸ್ಥ ಹರ್‌ದೀಪ್ ಎಸ್. ಬರಾರ್ ಗುರುವಾರ ತಿಳಿಸಿದ್ದಾರೆ.
ಏಪ್ರಿಲ್ ನಂತರ ಹಲವು ಹಲವು ಕಂಪನಿಗಳು ಬೆಲೆ ಏರಿಕೆ ಮಾಡಿವೆ. ಆದರೆ, ಕಚ್ಚಾ ಸಾಮಗ್ರಿಗಳ ದರ ಏರಿಕೆ ಆಗುತ್ತಿದ್ದರೂ ನಾವು ಬೆಲೆ ಹೆಚ್ಚಳ ಮಾಡಿರಲಿಲ್ಲ. ಹೊಸ ಸೆಲ್ಟೋಸ್ ಬಿಡುಗಡೆ ಮಾಡಲಾಗಿದ್ದು, ಅದಕ್ಕಾಗಿ ಸಾಕಷ್ಟು ಹೂಡಿಕೆ ಮಾಡಲಾಗಿದೆ. ಹೀಗಾಗಿ ಬೆಲೆ ಏರಿಕೆ ಮಾಡಲು ಇದು ಸೂಕ್ತ ಸಮಯ ಎಂದು ನಾವು ಭಾವಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.