ADVERTISEMENT

ಗುಜರಾತ್‌: ವಜ್ರ ಉದ್ಯಮಕ್ಕೆ ಪ್ಯಾಕೇಜ್‌ ಘೋಷಣೆ

ಪಿಟಿಐ
Published 25 ಮೇ 2025, 16:15 IST
Last Updated 25 ಮೇ 2025, 16:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸೂರತ್‌: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಜ್ರ ಉದ್ಯಮದ ಪುನಶ್ಚೇತನಕ್ಕೆ ಗುಜರಾತ್‌ ಸರ್ಕಾರವು, ವಿಶೇಷ ಪ್ಯಾಕೇಜ್‌ ಘೋಷಿಸಿದೆ. 

ಪ್ಯಾಕೇಜ್‌ನಡಿ ಈ ವಲಯದಲ್ಲಿ ದುಡಿಯುತ್ತಿರುವ ನೌಕರರ ಮಕ್ಕಳ ಒಂದು ವರ್ಷದ ಶಾಲಾ ಶುಲ್ಕವನ್ನು ಸರ್ಕಾರವೇ ಪಾವತಿಸಲಿದೆ. ಪಾಲಿಶ್‌ ಘಟಕಗಳಿಗೆ ನೀಡುವ ₹5 ಲಕ್ಷದ ಬಂಡವಾಳಕ್ಕೆ ಮೂರು ವರ್ಷದವರೆಗೆ ಬಡ್ಡಿ ಸಬ್ಸಿಡಿ ದೊರೆಯಲಿದೆ. ಅಲ್ಲದೆ, ಈ ಘಟಕಗಳಿಗೆ ವಿದ್ಯುತ್‌ ಶುಲ್ಕದಿಂದಲೂ ವಿನಾಯಿತಿ ನೀಡಲಾಗಿದೆ. 

ಗುಜರಾತ್‌ನ ಸೂರತ್‌ ಡೈಮಂಡ್‌ ಸಿಟಿಯು ಒರಟು ವಜ್ರಗಳ ಕಟ್‌ ಮತ್ತು ಪಾಲಿಶ್‌ಗೆ ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆದಿದೆ. ಜಾಗತಿಕ ಮಟ್ಟದಲ್ಲಿನ ಆರ್ಥಿಕ ಅನಿಶ್ವಿತ ಸ್ಥಿತಿಯಿಂದಾಗಿ ವಜ್ರದ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. 

ADVERTISEMENT

4 ಸಾವಿರಕ್ಕೂ ಹೆಚ್ಚು ಪಾಲಿಶ್‌ ಮತ್ತು ಸಂಸ್ಕರಣಾ ಘಟಕಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. 10 ಲಕ್ಷಕ್ಕೂ ಹೆಚ್ಚು ಜನರು ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.