ADVERTISEMENT

ಕೆಐಒಸಿಎಲ್‌ ಲಾಭ ₹ 20.71 ಕೋಟಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 19:45 IST
Last Updated 13 ನವೆಂಬರ್ 2019, 19:45 IST

ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್‌), 2019–20ನೇ ಹಣಕಾಸು ವರ್ಷದ ಅರ್ಧ ವಾರ್ಷಿಕ ಹಣಕಾಸು ಸಾಧನೆ ಪ್ರಕಟಿಸಿದ್ದು, ₹ 1,012.71 ಕೋಟಿ ವರಮಾನ ಗಳಿಸಿದೆ.

ಹಿಂದಿನ ವರ್ಷದ ₹ 875.42 ಕೋಟಿ ವರಮಾನಕ್ಕೆ ಹೋಲಿಸಿದರೆ ಈ ಬಾರಿ ಶೇ 15.68ರಷ್ಟು ಏರಿಕೆ ದಾಖಲಿಸಿದೆ. ನಿವ್ವಳ ಲಾಭವು ₹ 20.71 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ನಿವ್ವಳ ಲಾಭವು ₹ 45.89 ಕೋಟಿಗಳಷ್ಟಿತ್ತು.

‘ಹೊಸ ಮಾರುಕಟ್ಟೆಯಾದ ಮಧ್ಯಪ್ರಾಚ್ಯದ ದೇಶಗಳಿಗೆ ಉಕ್ಕಿನ ಉಂಡೆಗಳನ್ನು ರಫ್ತು ಮಾಡಿದ್ದರಿಂದ ವರಮಾನದಲ್ಲಿ ಹೆಚ್ಚಳ ಉಂಟಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉಕ್ಕು ಮತ್ತು ಉಕ್ಕಿನ ಉಂಡೆಗಳ ಬೆಲೆ ತಗ್ಗಿರುವುದರಿಂದ ಲಾಭದ ಪ್ರಮಾಣ ಕಡಿಮೆಯಾಗಿದೆ’ ಎಂದು ಹೇಳಿದ್ದಾರೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂ. ವಿ. ಸುಬ್ಬರಾವ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.