ನವದೆಹಲಿ: 2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಕೋಟಕ್ ಮಹೀಂದ್ರ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 14ರಷ್ಟು ಇಳಿಕೆಯಾಗಿದೆ.
ಈ ತ್ರೈಮಾಸಿಕದಲ್ಲಿ ಬ್ಯಾಂಕ್ ಒಟ್ಟು ₹3,552 ಕೋಟಿ ಲಾಭ ಗಳಿಸಿದೆ. 2023–24ನೇ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹4,133 ಕೋಟಿ ಲಾಭ ಗಳಿಸಿತ್ತು.
ಈ ತ್ರೈಮಾಸಿಕದಲ್ಲಿ ಒಟ್ಟು ವರಮಾನ ₹16,712 ಕೋಟಿ ಆಗಿದೆ. ಬಡ್ಡಿ ವರಮಾನದಿಂದ ₹13,530 ಕೋಟಿ ಗಳಿಸಲಾಗಿದೆ ಎಂದು ಬ್ಯಾಂಕ್, ಶನಿವಾರ ಷೇರುಪೇಟೆಗೆ ತಿಳಿಸಿದೆ.
ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 1.39ರಿಂದ ಶೇ 1.42ಕ್ಕೆ ಏರಿಕೆಯಾಗಿದೆ. ನಿವ್ವಳ ಎನ್‌ಪಿಎ ಶೇ 0.34ರಿಂದ ಶೇ 0.31ಕ್ಕೆ ತಗ್ಗಿದೆ. ಪ್ರತಿ ಷೇರಿಗೆ ₹2.50 ಲಾಭಾಂಶ ನೀಡಲು ಬ್ಯಾಂಕ್‌ನ ಆಡಳಿತ ಮಂಡಳಿಯು ಅನುಮೋದನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.