ADVERTISEMENT

ಎಲ್‌ ಆ್ಯಂಡ್‌ ಟಿ ಫೈನಾನ್ಸ್‌ಗೆ ₹701 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 16:19 IST
Last Updated 20 ಜುಲೈ 2025, 16:19 IST
<div class="paragraphs"><p>ಹಣ </p></div>

ಹಣ

   

ಬೆಂಗಳೂರು: ಬ್ಯಾಂಕೇತರ ಹಣಕಾಸು ಕಂಪನಿ ‘ಎಲ್ ಆ್ಯಂಡ್ ಟಿ ಫೈನಾನ್ಸ್ ಲಿಮಿಟೆಡ್’ (ಎಲ್‌ಟಿಎಫ್) ಪ್ರಸಕ್ತ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹701 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದ ಪ್ರಮಾಣ ಶೇ 2ರಷ್ಟು ಹೆಚ್ಚಳವಾಗಿದೆ. ಒಟ್ಟು ಸಾಲ ನೀಡಿಕೆಯಲ್ಲಿ ಶೇ 15ರಷ್ಟು ಹೆಚ್ಚಳವಾಗಿದ್ದು, ₹1.02 ಲಕ್ಷ ಕೋಟಿಯಾಗಿದೆ.

ADVERTISEMENT

ತ್ರೈಮಾಸಿಕದಲ್ಲಿ ವ್ಯಕ್ತಿಗಳಿಗೆ ನೀಡಿರುವ ಸಾಲದ ಮೊತ್ತವು ₹17,522 ಕೋಟಿಯಷ್ಟಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ 98ರಷ್ಟಾಗಿದೆ ಎಂದು ತಿಳಿಸಿದೆ.  

‘ಪ್ರಸ್ತುತ ತ್ರೈಮಾಸಿಕವು ಸವಾಲಿನದ್ದಾಗಿತ್ತು, ಕಂಪನಿಯು ಗುರಿ ಸಾಧನೆಯ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿತ್ತು. ಇದರಿಂದಾಗಿ ಮಾರುಕಟ್ಟೆಯ ಅಡೆತಡೆಗಳನ್ನು ನಿರ್ವಹಿಸಿ ಸ್ಥಿರವಾದ ಕಾರ್ಯಕ್ಷಮತೆಯನ್ನು ಕಂಪನಿ ಸಾಧಿಸಿದೆ’ ಎಂದು ಎಲ್‌ಟಿಎಫ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುದೀಪ್ತಾ ರಾಯ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.