ADVERTISEMENT

ಕಾರ್ಮಿಕ ಸಂಹಿತೆ ವಾಪಸ್‌ಗೆ ಒತ್ತಾಯ: ದೇಶದಾದ್ಯಂತ ಮುಷ್ಕರ ನಡೆಸಲು ತೀರ್ಮಾನ

ಪಿಟಿಐ
Published 9 ಡಿಸೆಂಬರ್ 2025, 15:51 IST
Last Updated 9 ಡಿಸೆಂಬರ್ 2025, 15:51 IST
   

ನವದೆಹಲಿ: ಕಾರ್ಮಿಕ ಸಂಹಿತೆಗಳನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿ, ಫೆಬ್ರುವರಿ ತಿಂಗಳಿನಲ್ಲಿ ದೇಶದಾದ್ಯಂತ ಸಾರ್ವತ್ರಿಕ ಮುಷ್ಕರ ನಡೆಸಲು ಕಾರ್ಮಿಕ ಒಕ್ಕೂಟಗಳು ನಿರ್ಧರಿಸಿವೆ. 

ಮುಷ್ಕರ ನಡೆಸುವ ದಿನಾಂಕವನ್ನು ಡಿಸೆಂಬರ್‌ 22ರಂದು ಪ್ರಕಟಿಸಲಾಗುವುದು ಎಂದು ಒಕ್ಕೂಟ ಮಂಗಳವಾರ ತಿಳಿಸಿದೆ. 

ಸಂಯುಕ್ತ ಕಿಸಾನ್ ಮೋರ್ಚಾ ಸಹ ತಮ್ಮ ಬೇಡಿಕೆಗಳ ಜೊತೆಗೆ ಬೀಜ ಮಸೂದೆ ಮತ್ತು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಗ್ರಾಮಗಳು ಸೇರಿದಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಜ್ಜುಗೊಂಡಿದೆ ಎಂದು ತಿಳಿಸಿದೆ.

ಕಾರ್ಮಿಕ ಸಂಹಿತೆಗಳನ್ನು ಹಿಂತೆಗೆದುಕೊಳ್ಳುವವರೆಗೆ ಹಂತಹಂತವಾಗಿ ಹೋರಾಟವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.