ADVERTISEMENT

ಎಲ್‌ ಆ್ಯಂಡ್ ಟಿ: ₹3,926 ಕೋಟಿ ಲಾಭ

ಪಿಟಿಐ
Published 29 ಅಕ್ಟೋಬರ್ 2025, 15:43 IST
Last Updated 29 ಅಕ್ಟೋಬರ್ 2025, 15:43 IST
ಎಲ್‌ ಆ್ಯಂಡ್ ಟಿ
ಎಲ್‌ ಆ್ಯಂಡ್ ಟಿ   

ನವದೆಹಲಿ : ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ನಿರ್ಮಾಣ ಕ್ಷೇತ್ರದ ಪ್ರಮುಖ ಕಂಪನಿ ಲಾರ್ಸನ್ ಆ್ಯಂಡ್ ಟೊಬ್ರೊ (ಎಲ್‌ ಆ್ಯಂಡ್ ಟಿ) ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹3,926 ಕೋಟಿ ನಿವ್ವಳ ಲಾಭ ಗಳಿಸಿದೆ. ಕಂಪನಿಯ ನಿವ್ವಳ ಲಾಭದಲ್ಲಿ ಶೇ 15.6ರಷ್ಟು ಹೆಚ್ಚಳವಾಗಿದೆ.

ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿ ₹3,395 ಕೋಟಿ ಲಾಭ ಗಳಿಸಿತ್ತು. ವರಮಾನದಲ್ಲಿನ ಹೆಚ್ಚಳದಿಂದ ಲಾಭದ ಪ್ರಮಾಣ ಏರಿಕೆ ಆಗಿದೆ ಎಂದು ಕಂಪನಿ ಷೇರುಪೇಟೆಗೆ ಬುಧವಾರ ತಿಳಿಸಿದೆ.

ವರಮಾನದಲ್ಲಿ ಶೇ 10ರಷ್ಟು ಹೆಚ್ಚಳವಾಗಿದ್ದು, ₹67,983 ಕೋಟಿಯಷ್ಟಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕಂಪನಿ ಒಟ್ಟು ₹2,10,237 ಕೋಟಿ ಮೌಲ್ಯದ ಕಾರ್ಯಾದೇಶ ಪಡೆದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 39ರಷ್ಟು ಏರಿಕೆಯಾಗಿದೆ. ಈ ಕಾರ್ಯಾದೇಶದ ಪೈಕಿ ಅಂತರರಾಷ್ಟ್ರೀಯ ಕಾರ್ಯಾದೇಶವು ₹1,24,236 ಕೋಟಿಯಷ್ಟಾಗಿದ್ದು, ಒಟ್ಟು ಕಾರ್ಯಾದೇಶದಲ್ಲಿ ಶೇ 59ರಷ್ಟು ಪಾಲು ಹೊಂದಿದೆ ಎಂದು ಕಂಪನಿ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.