ADVERTISEMENT

ಎಲ್‌ಐಸಿ ಸಂಪತ್ತು ವೃದ್ಧಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 19:30 IST
Last Updated 1 ಸೆಪ್ಟೆಂಬರ್ 2018, 19:30 IST

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಒಟ್ಟು ಸಂಪತ್ತು ಮೌಲ್ಯ ₹28 ಲಕ್ಷ ಕೋಟಿ ಮೀರಿದೆ. ಸದ್ಯ, 1.12 ಲಕ್ಷ ಸಿಬ್ಬಂದಿ ಹಾಗೂ 11.49 ಲಕ್ಷ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ.

ಎಲ್‌ಐಸಿ ತನ್ನ 62ನೇ ವರ್ಷಾಚರಣೆ ಸಂಭ್ರಮದಲ್ಲಿದ್ದು, ಜೀವ ವಿಮಾ ವಹಿವಾಟಿನಲ್ಲಿ ಹೊಸ ಯೋಜನೆಗಳು, ಗ್ರಾಹಕ ಸೇವೆ, ತಂತ್ರಜ್ಞಾನ ಬಳಕೆ ಒಳಗೊಂಡು ಹಲವು ರೀತಿಯಲ್ಲಿ ದಾಖಲೆಗಳನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಪಾಲಿಸಿಗಳನ್ನು ನೀಡುವುದರಲ್ಲಿ ಶೇ 75.67 ರಷ್ಟು ಮಾರುಕಟ್ಟೆ ಪಾಲು ಹೊಂದುವ ಮೂಲಕ ಮುಂಚೂಣಿಯಲ್ಲಿದೆ.

ADVERTISEMENT

2017–18ರಲ್ಲಿ ಹೊಸ ವಹಿವಾಟಿನಲ್ಲಿ ಶೇ 8.17 ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು ವರಮಾನ ₹5.23 ಲಕ್ಷ ಕೋಟಿ ಇದೆ.ವೈಯಕ್ತಿಕ ವಹಿವಾಟು ವಿಭಾಗದಲ್ಲಿ 29.12 ಕೋಟಿ ಕುಟುಂಬಗಳಿಗೆ ಹಾಗೂ ಗುಂಪು ವಿಮಾ ವಿಭಾಗದಲ್ಲಿ 11.78 ಕೋಟಿ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ಒದಗಿಸಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.