ADVERTISEMENT

ಯುಗಾದಿ, ರಂಜಾನ್‌ ದಿನದಂದೂ ಎಲ್‌ಐಸಿ ಕಚೇರಿ ಕಾರ್ಯ ನಿರ್ವಹಣೆ

ಪಿಟಿಐ
Published 29 ಮಾರ್ಚ್ 2025, 13:30 IST
Last Updated 29 ಮಾರ್ಚ್ 2025, 13:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಶಾಖೆಗಳು ಭಾನುವಾರ ಮತ್ತು ಸೋಮವಾರ ಕೂಡ ಕಾರ್ಯ ನಿರ್ವಹಿಸಲಿವೆ.

2024–25ನೇ ಆರ್ಥಿಕ ವರ್ಷವು ಮಾರ್ಚ್ 31ಕ್ಕೆ ಮುಕ್ತಾಯವಾಗಲಿದೆ. ವಿಮಾದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ವಲಯ ಮತ್ತು ವಿಭಾಗಗಳ ವ್ಯಾಪ್ತಿಯ ಶಾಖೆಗಳು ಈ ಎರಡು ದಿನಗಳಂದು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಎಲ್‌ಐಸಿ ತಿಳಿಸಿದೆ.

ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಈ ಕುರಿತು ಮಾರ್ಗಸೂಚಿ ಹೊರಡಿಸಿದೆ. ಇದರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.