ADVERTISEMENT

ಎಲ್‌ಐಸಿ ಲಾಭ ಶೇ 17ರಷ್ಟು ಹೆಚ್ಚಳ

ಪಿಟಿಐ
Published 5 ಫೆಬ್ರುವರಿ 2026, 15:43 IST
Last Updated 5 ಫೆಬ್ರುವರಿ 2026, 15:43 IST
ಎಲ್‌ಐಸಿ
ಎಲ್‌ಐಸಿ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ₹12,958 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ನಿಗಮವು ₹11,056 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 17ರಷ್ಟು ಹೆಚ್ಚಳವಾಗಿದೆ ಎಂದು ನಿಗಮವು ಷೇರುಪೇಟೆಗೆ ತಿಳಿಸಿದೆ.

ವಿಮಾ ಕಂತಿನ ಮೂಲಕ ಗಳಿಸಿದ ವರಮಾನವು ₹1.06 ಲಕ್ಷ ಕೋಟಿಯಿಂದ ₹1.25 ಲಕ್ಷ ಕೋಟಿಗೆ ಏರಿಕೆಯಾಗಿದೆ. ಒಟ್ಟು ವರಮಾನವು ₹2.01 ಲಕ್ಷ ಕೋಟಿಯಿಂದ ₹2.33 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. 

ADVERTISEMENT

ಮೊದಲ ವರ್ಷದ ಕಂತಿನ ಮೂಲಕ ₹10,605 ಕೋಟಿ ಗಳಿಸಲಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಇದು ₹7,285 ಕೋಟಿಯಷ್ಟಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.