ADVERTISEMENT

ಎಲ್‌ಐಸಿ: ಕುಸಿದ ಮಾರುಕಟ್ಟೆ ಬಂಡವಾಳ ಮೌಲ್ಯ

ಪಿಟಿಐ
Published 6 ಜೂನ್ 2022, 13:32 IST
Last Updated 6 ಜೂನ್ 2022, 13:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳ ಮೌಲ್ಯ ಸೋಮವಾರ ಶೇಕಡ 3ರವರೆಗೂ ಇಳಿಕೆ ಆಗಿದೆ. ಇದರಿಂದಾಗಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ₹ 5 ಲಕ್ಷ ಕೋಟಿಗಿಂತ ಕೆಳಕ್ಕೆ ಬಂದಿದೆ.

ಐದು ದಿನಗಳಿಂದಲೂ ಷೇರು ಮೌಲ್ಯ ಇಳಿಕೆ ಕಾಣುತ್ತಿದ್ದು, ಈ ಅವಧಿಯಲ್ಲಿ ಒಟ್ಟಾರೆ ಶೇ 7.12ರಷ್ಟು ಇಳಿಕೆ ಕಂಡಿದೆ. ಐಪಿಒ ವೇಳೆ ₹ 949ಕ್ಕೆ ಎಲ್‌ಐಸಿ ಷೇರು ಖರೀದಿ ಮಾಡಿದ್ದವರು ಈಗ ಶೇಕಡ 18ರಷ್ಟು ನಷ್ಟ ಕಂಡಿದ್ದಾರೆ.

ಬಿಎಸ್‌ಇನಲ್ಲಿ ಕಂಪನಿ ಷೇರು ಮೌಲ್ಯ ಸೋಮವಾರ ಶೇ 2.86ರಷ್ಟು ಇಳಿಕೆ ಆಗಿದ್ದು, ಪ್ರತಿ ಷೇರಿನ ಬೆಲೆ ₹ 777.40ಕ್ಕೆ ತಲುಪಿದೆ. ಎನ್‌ಎಸ್‌ಇನಲ್ಲಿ ಶೇ 2.96ರಷ್ಟು ಕಡಿಮೆ ಆಗಿ ಪ್ರತಿ ಷೇರಿನ ಬೆಲೆ ₹ 776.50ಕ್ಕೆ ಇಳಿಕೆ ಆಗಿದೆ.

ADVERTISEMENT

ದಿನದ ವಹಿವಾಟಿನ ಅಂತ್ಯದ ವೇಳೆಗೆ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 4,91,705 ಕೋಟಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.