ADVERTISEMENT

ಎಲ್‌ಐಸಿಯಲ್ಲಿದೆ ₹ 21,539 ಕೋಟಿ ವಾರಸುದಾರರಿಲ್ಲದ ಮೊತ್ತ !

ಪಿಟಿಐ
Published 16 ಫೆಬ್ರುವರಿ 2022, 11:35 IST
Last Updated 16 ಫೆಬ್ರುವರಿ 2022, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಬಳಿ ವಾರಸುದಾರರು ಇಲ್ಲದೇ ಉಳಿದಿರುವ ಮೊತ್ತವು 2021ರ ಸೆಪ್ಟೆಂಬರ್‌ ಅಂತ್ಯಕ್ಕೆ ₹ 21,539 ಕೋಟಿ ಆಗಿದೆ.

ಎಲ್‌ಐಸಿಯು, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಿರುವ ಐಪಿಒ ಕರಡು ಪತ್ರದಲ್ಲಿ ಈ ಮಾಹಿತಿ ಇದೆ. 2021ರ ಮಾರ್ಚ್‌ ಅಂತ್ಯದ ವೇಳೆಗೆ ವಾರಸುದಾರರು ಇಲ್ಲದೇ ಉಳಿದಿರುವ ಮೊತ್ತವು ₹ 18,495 ಕೋಟಿ ಇತ್ತು.

ವಾರಸುದಾರರು ಇಲ್ಲದೇ ಉಳಿದಿರುವ ₹ 1,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಬಗ್ಗೆ ಪ್ರತಿಯೊಂದು ವಿಮಾ ಕಂಪನಿಯು ತನ್ನ ಜಾಲತಾಣದಲ್ಲಿ ಮಾಹಿತಿ ಪ್ರಕಟಿಸಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.