ADVERTISEMENT

ಎಲ್‌ಐಸಿ ಚಂದಾದಾರರಿಗಿನ್ನು ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ

ಐಎಎನ್ಎಸ್
Published 8 ಫೆಬ್ರುವರಿ 2023, 10:52 IST
Last Updated 8 ಫೆಬ್ರುವರಿ 2023, 10:52 IST
   

ನವದೆಹಲಿ: ಭಾರತೀಯ ಜೀವ ವಿಮೆ ನಿಗಮ(ಎಲ್‌ಐಸಿ) ತನ್ನ ಚಂದಾದಾರರಿಗೆ ವಾಟ್ಸ್‌ಆ್ಯಪ್‌ನಲ್ಲಿ 24x7 ಕಾಲ ಸಂವಾದ ಸೇವೆಯನ್ನು ಬುಧವಾರದಿಂದ ಪರಿಚಯಿಸಿದೆ. ಎಲ್‌ಐಸಿ ಅಧಿಕೃತ ವಾಟ್ಸ್‌ಆ್ಯಪ್‌, ಚಾಟ್‌ಬಾಟ್‌ನಲ್ಲಿ ಪಾಲಿಸಿಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸೇವೆಗಳನ್ನು ಸುಲಭವಾಗಿ ಪಡೆಯಲು ಪಾಲಿಸಿದಾರರಿಗೆ ಅವಕಾಶ ನೀಡುತ್ತದೆ.

ಸಾಲದ ಅರ್ಹತೆ, ಮರುಪಾವತಿ ಸಂಬಂಧಿ ಮಾಹಿತಿ, ಬೋನಸ್ ಮಾಹಿತಿ, ಪ್ರೀಮಿಯಂ ಬಾಕಿ, ನವೀಕರಣ ದಿನಾಂಕ ಸೇರಿದಂತೆ 11 ಸೇವೆಗಳನ್ನು ನೇರವಾಗಿ ವಾಟ್ಸ್‌ಆ್ಯಪ್‌ನಲ್ಲಿ ಪಾಲಿಸಿದಾರರು ಪ್ರವೇಶಿಸಲು ಸಾಧ್ಯವಾಗುತ್ತದೆ.

ವಾಟ್ಸ್‌ಆ್ಯಪ್‌ನಲ್ಲಿ ಎಲ್‌ಐಸಿ ಸೇವೆಗಳು ಪಾಲಿಸಿದಾರರಿಗೆ ಸರಳ ಮತ್ತು ಸುರಕ್ಷಿತ ಅನುಭವವನ್ನು ನೀಡುತ್ತದೆ ಎಂದು ವಾಟ್ಸ್‌ಆ್ಯಪ್‌ ಇಂಡಿಯಾದ ಬಿಸಿನೆಸ್ ಮೆಸೇಜಿಂಗ್ ನಿರ್ದೇಶಕ ರವಿ ಗರ್ಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸೇವೆಗಳನ್ನು ಪಡೆಯಲು, ಪಾಲಿಸಿದಾರರು ಮೊದಲು ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ +91 8976862090 ಗೆ 'ಹಾಯ್' ಅನ್ನು ಕಳುಹಿಸಿ ಮತ್ತು 11 ಸೇವೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.