ADVERTISEMENT

ಎಂಎಫ್‌ ಆತ್ಮವಿಶ್ವಾಸ ಹೆಚ್ಚಿಸಿದ ವಿಶೇಷ ನಗದು: ಸೆಬಿ

ಪಿಟಿಐ
Published 27 ಜೂನ್ 2020, 15:01 IST
Last Updated 27 ಜೂನ್ 2020, 15:01 IST
ಮ್ಯೂಚುವಲ್‌ ಫಂಡ್‌
ಮ್ಯೂಚುವಲ್‌ ಫಂಡ್‌   

ಕೋಲ್ಕತ್ತ: ಸೆಬಿ ಮತ್ತು ಆರ್‌ಬಿಐ ನೀಡಿರುವ ನೆರವಿನಿಂದಾಗಿ ಮ್ಯೂಚುವಲ್‌ ಫಂಡ್‌ ಉದ್ಯಮದ ಬಗ್ಗೆ ಹೂಡಿಕೆದಾರರಲ್ಲಿ ವಿಶ್ವಾಸ ಮರಳುವಂತಾಗಿದೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೇಳಿದೆ.

‘ಸೆಬಿ ಮತ್ತು ಆರ್‌ಬಿಐ ಜಂಟಿಯಾಗಿ ನಗದು ಸೌಲಭ್ಯವನ್ನು ವಿಸ್ತರಿಸಿವೆ. ಇದರಿಂದಾಗಿ ಉದ್ಯಮದ ಬಗ್ಗೆ ಮೂಡಿದ್ದ ಆತಂಕ ದೂರಾಗಿದೆ’ ಎಂದು ಸೆಬಿಯ ಪೂರ್ಣಾವಧಿ ನಿರ್ದೇಶಕ ಜಿ. ಮಹಾಲಿಂಗಂ ತಿಳಿಸಿದ್ದಾರೆ.

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌, ಹೂಡಿಕೆದಾರರಿಗೆ ಪಾವತಿಸಲು ಹಣ ಇಲ್ಲದ ಕಾರಣಕ್ಕೆ ತನ್ನ ಆರು ಸಾಲ ನಿಧಿ (ಡೆಟ್‌ ಫಂಡ್‌) ಯೋಜನೆಗಳನ್ನು ರದ್ದುಪಡಿಸಿದೆ. ಇದರಿಂದ ಮ್ಯೂಚುವಲ್‌ ಫಂಡ್‌ಗಳ ಮೇಲಿನ ಒತ್ತಡ ತಗ್ಗಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌, ಏಪ್ರಿಲ್‌ನಲ್ಲಿ ₹ 50 ಸಾವಿರ ಕೋಟಿ ಮೊತ್ತದ ವಿಶೇಷ ನಗದು ಸೌಲಭ್ಯ ಪ್ರಕಟಿಸಿದೆ.

ADVERTISEMENT

ಈ ಸೌಲಭ್ಯದಡಿ, ಆರ್‌ಬಿಐ ಅಗ್ಗದ ಸ್ಥಿರ ರೆಪೊ ದರದಡಿ 90 ದಿನಗಳವರೆಗೆ ಬ್ಯಾಂಕ್‌ಗಳಿಗೆ ಹಣಕಾಸು ಸೌಲಭ್ಯ ಕಲ್ಪಿಸಲಿದೆ. ಈ ನೆರವನ್ನು ಬ್ಯಾಂಕ್‌ಗಳು ಮ್ಯೂಚುವಲ್‌ ಫಂಡ್‌ಗಳ ನಗದು ಸಮಸ್ಯೆ ನಿವಾರಿಸುವ ಉದ್ದೇಶಕ್ಕೆ ಮಾತ್ರ ಸಾಲ ನೀಡಲು ಬಳಸಿಕೊಳ್ಳಬೇಕು ಎಂದು ನಿಬಂಧನೆ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.