ADVERTISEMENT

ಕ್ವಾರಿಗಳ ದೀರ್ಘಾವಧಿ ಗುತ್ತಿಗೆ: ಎಫ್‌ಐಜಿಎಸ್‌ಐ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 14:01 IST
Last Updated 24 ನವೆಂಬರ್ 2021, 14:01 IST

ಬೆಂಗಳೂರು: ಗ್ರಾನೈಟ್ ಮತ್ತು ಕಲ್ಲು ಉದ್ಯಮದ ಬೆಳವಣಿಗೆಗೆ ಕ್ವಾರಿಗಳನ್ನು 30ರಿಂದ 50 ವರ್ಷಗಳ ಅವಧಿಗೆ ಗುತ್ತಿಗೆ ನೀಡಬೇಕು ಎಂದು ಭಾರತೀಯ ಗ್ರಾನೈಟ್ ಮತ್ತು ಕಲ್ಲು ಉದ್ಯಮದ ಒಕ್ಕೂಟವು (ಎಫ್‌ಐಜಿಎಸ್‌ಐ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

‘ಉದ್ಯಮದ ಸವಾಲುಗಳು ಮತ್ತು ಅವಕಾಶಗಳು’ ವಿಷಯವಾಗಿ ಬುಧವಾರ ನಡೆದ ಸಮಾವೇಶದಲ್ಲಿ, ಉದ್ಯಮವನ್ನು ಬೆಳವಣಿಗೆಯ ಹಾದಿಗೆ ತರಲು ಅಗತ್ಯವಿರುವ ಕ್ರಮಗಳ ಕುರಿತು ಸರ್ಕಾರದ ಗಮನ ಸೆಳೆಯಲು ಒಕ್ಕೂಟವು ಯತ್ನಿಸಿತು. ಗ್ರಾನೈಟ್ ಬ್ಲಾಕ್‌ಗಳ ಆಮದನ್ನು ಓಪನ್ ಜನರಲ್ ಲೈಸೆಲ್ಸ್ (ಒಜಿಎಲ್‌) ಅಡಿ ತರುವುದು, ಬ್ಲಾಕ್‌ಗಳ ಮೇಲೆ, ಸ್ಲ್ಯಾಬ್‌ಗಳು ಮತ್ತು ಟೈಲ್ಸ್‌ಗಳ ಮೇಲೆ ಜಿಎಸ್‌ಟಿ ಪ್ರಮಾಣವನ್ನು ಕಡಿಮೆ ಮಾಡಲು ಒಕ್ಕೂಟವು ಒತ್ತಾಯ ಮಾಡಿದೆ.

ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್. ಕೃಷ್ಣ ಪ್ರಸಾದ್, ‘ಕಚ್ಚಾ ಸಾಮಗ್ರಿಗಳ ಕೊರತೆಯ ಸಮಸ್ಯೆಯನ್ನು ನೀಗಿಸಲು ‘ಒಜಿಎಲ್‌’ ಅಡಿಯಲ್ಲಿ ಗ್ರಾನೈಟ್ ಅನ್ನು ಉಚಿತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.