ADVERTISEMENT

ಸಬ್ಸಿಡಿ ರಹಿತ ಅಡುಗೆ ಅನಿಲ ‌ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 18:57 IST
Last Updated 1 ಏಪ್ರಿಲ್ 2019, 18:57 IST
   

ನವದೆಹಲಿ: ಸಬ್ಸಿಡಿರಹಿತ 14.2 ಕೆಜಿಯ ಅಡುಗೆ ಅನಿಲ ಸಿಲಿಂಡರ್‌ನ (ಎಲ್‌ಪಿಜಿ) ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ₹ 5ರಂತೆ ಹೆಚ್ಚಿಸಲಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಬೆಲೆಯನ್ನು ಎರಡನೆ ಬಾರಿಗೆ ಏರಿಸಲಾಗಿದೆ. ಮಾರ್ಚ್‌ 1ರಂದು ಬೆಲೆಯನ್ನು ₹ 42.5ರಂತೆ ಹೆಚ್ಚಿಸಲಾಗಿತ್ತು.

ಸಬ್ಸಿಡಿಸಹಿತ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ADVERTISEMENT

ಪಡಿತರ ಅಂಗಡಿ ಮೂಲಕ ವಿತರಿಸುವ ಸೀಮೆಎಣ್ಣೆಯ ದರವನ್ನು ಪ್ರತಿ ಲೀಟರ್‌ಗೆ 30 ಪೈಸೆ ಹೆಚ್ಚಿಸಲಾಗಿದೆ.

ವಿಮಾನ ಇಂಧನ: ವಿಮಾನ ಇಂಧನದ ಬೆಲೆಯನ್ನು ಪ್ರತಿ ಕಿಲೊ ಲೀಟರ್‌ಗೆ₹ 677.1 ರಂತೆ ಹೆಚ್ಚಿಸಲಾಗಿದೆ.

ದೆಹಲಿಯಲ್ಲಿನ ಬೆಲೆ ಈಗ₹ 63,472.22ಕ್ಕೆ ಏರಿಕೆಯಾಗಿದೆ. ಮಾರ್ಚ್‌ 1ರಂದು ₹ 4,734.15 ರಂತೆ ಹೆಚ್ಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.