ADVERTISEMENT

ಲಾಭಾಂಶ ಘೋಷಿಸಿದ ಎಲ್‌ ಆ್ಯಂಡ್‌ ಟಿ ಫೈನಾನ್ಸ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 12:25 IST
Last Updated 9 ಜೂನ್ 2023, 12:25 IST
 ಎಲ್‌ ಆಂಡ್‌ ಟಿ ಕಂಪೆನಿ
ಎಲ್‌ ಆಂಡ್‌ ಟಿ ಕಂಪೆನಿ   

ಬೆಂಗಳೂರು: ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಎಲ್‌ ಆ್ಯಂಡ್‌ ಟಿ ಫೈನಾನ್ಸ್‌ ಹೋಲ್ಡಿಂಗ್‌ ಲಿಮಿಟೆಡ್‌ (ಎಲ್‌ಟಿಎಫ್‌ಎಚ್‌) 2022-23ನೆಯ ಆರ್ಥಿಕ ವರ್ಷಕ್ಕೆ ಪ್ರತಿ ಷೇರಿಗೆ ₹2ರಷ್ಟು ಲಾಭಾಂಶ ಘೋಷಿಸಿದೆ.

ಮುಂಬೈಯಲ್ಲಿ ನಡೆದ ಕಂಪನಿಯ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಗಿದೆ. ಕಂಪನಿಯು ಇದುವರೆಗೆ ಘೋಷಿಸಿರುವ ಅತಿಹೆಚ್ಚಿನ ಮೊತ್ತದ ಲಾಭಾಂಶ ಇದು. ಕಂಪೆನಿಯ ವಾರ್ಷಿಕ ಮಹಾಸಭೆಯು ಈ ನಿರ್ಣಯವನ್ನು ಅಂಗೀಕರಿಸಿದ 30 ದಿನಗಳೊಳಗೆ ಲಾಭಾಂಶದ ಮೊತ್ತವನ್ನು ಷೇರುದಾರರಿಗೆ ಪಾವತಿ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

2022-23ರ ಹಣಕಾಸು ವರ್ಷದಲ್ಲಿ ಕಂಪನಿಯು ₹1,623 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಹಿಂದಿನ ವರ್ಷದ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ 52ರಷ್ಟು ಹೆಚ್ಚು.

ADVERTISEMENT

‘ಲಾಭಾಂಶದ ಮೊತ್ತವು ಕಂಪನಿಯು ಹೊಂದಿರುವ ಸದೃಢ ಆರ್ಥಿಕ ಸ್ಥಿತಿಯ ದ್ಯೋತಕ. ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯು ಎಲ್ಲ ವಿಭಾಗಗಳಲ್ಲಿಯೂ ಅತ್ಯುತ್ತಮ ಸಾಧನೆ ತೋರಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೀನನಾಥ್‌ ದುಬಾಷಿ ಹೇಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.