
ನವದೆಹಲಿ: ದೇಶದ ಮೂಲಸೌಕರ್ಯ ನಿರ್ಮಾಣ ವಲಯದ ಪ್ರಮುಖ ಕಂಪನಿ ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್‌ಆ್ಯಂಡ್‌ಟಿ) ಡಿಸೆಂಬರ್ ತ್ರೈಮಾಸಿಕದಲ್ಲಿ ₹3,215 ಕೋಟಿ ಲಾಭ ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಶೇ 4.2ರಷ್ಟು ಕಡಿಮೆ.
ಹೊಸದಾಗಿ ಜಾರಿಗೆ ಬಂದ ಕಾರ್ಮಿಕ ಸಂಹಿತೆಗಳಿಗೆ ಮಾಡಬೇಕಿರುವ ಒಂದು ಬಾರಿಯ ವೆಚ್ಚದ ಕಾರಣದಿಂದಾಗಿ ಲಾಭ ಕಡಿಮೆ ಆಗಿದೆ ಎಂದು ಕಂಪನಿ ಹೇಳಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹3,359 ಕೋಟಿ ತೆರಿಗೆ ನಂತರದ ಲಾಭ ದಾಖಲಿಸಿತ್ತು.
ಆದರೆ ಈ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆ ವರಮಾನವು ಶೇ 10ರಷ್ಟು ಜಿಗಿದಿದ್ದು, ₹71,450 ಕೋಟಿಗೆ ತಲುಪಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹64,668 ಕೋಟಿ ಆಗಿತ್ತು.
2025ರ ಡಿಸೆಂಬರ್ 31ಕ್ಕೆ ಅನ್ವಯವಾಗುವಂತೆ ಕಂಪನಿಯು ಪಡೆದಿರುವ ಕಾರ್ಯಾದೇಶಗಳ ಒಟ್ಟು ಮೊತ್ತವು ₹7.33 ಲಕ್ಷ ಕೋಟಿ ಆಗಿದೆ. ಇದು 2024ರ ಡಿಸೆಂಬರ್ ಅಂತ್ಯಕ್ಕೆ ಇದ್ದ ಕಾರ್ಯಾದೇಶಗಳ ಒಟ್ಟು ಮೊತ್ತಕ್ಕೆ ಹೋಲಿಸಿದರೆ ಶೇ 30ರಷ್ಟು ಹೆಚ್ಚು. ಕಂಪನಿಯು ಈಗ ಹೊಂದಿರುವ ಕಾರ್ಯಾದೇಶಗಳಲ್ಲಿ ವಿದೇಶಗಳ ಪಾಲು ಶೇ 49ರಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.