ನವದೆಹಲಿ: ಹರಿಯಾಣದ ಪಾಣಿಪತ್‌ನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಸಂಸ್ಕರಣಾ ಘಟಕದ ಬಳಿ ದೇಶದ ಅತಿದೊಡ್ಡ ಹಸಿರು ಜಲಜನಕ (ಗ್ರೀನ್ ಹೈಡ್ರೋಜನ್) ಘಟಕವನ್ನು ಸ್ಥಾಪನೆ ಮಾಡಲಾಗುವುದು ಎಂದು ಎಲ್ ಆ್ಯಂಡ್ ಟಿ ಕಂಪನಿ ಸೋಮವಾರ ತಿಳಿಸಿದೆ.
ರಾಷ್ಟ್ರೀಯ ಹಸಿರು ಜಲಜನಕ ಮಿಷನ್‌ನ ಧ್ಯೇಯಕ್ಕೆ ಈ ಯೋಜನೆಯು ಪೂರಕವಾಗಿದೆ ಎಂದು ಕಂಪನಿ ಹೇಳಿದೆ. ಹಸಿರು ಜಲಜನಕ ಉತ್ಪಾದನೆ ಮತ್ತು ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ ತಾಣವಾಗಿ ರೂಪಿಸುವ ಗುರಿಯನ್ನು ಈ ಮಿಷನ್ ಹೊಂದಿದೆ.
ಎಲ್ ಆ್ಯಂಡ್ ಟಿ ಕಂಪನಿಯ ಅಂಗಸಂಸ್ಥೆಯಾದ ಎಲ್ ಆ್ಯಂಡ್ ಟಿ ಎನರ್ಜಿ ಗ್ರೀನ್‌ಟೆಕ್ ಲಿಮಿಟೆಡ್ ಈ ಘಟಕವನ್ನು ನಿರ್ಮಾಣ ಮಾಡಲಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ 25 ವರ್ಷದವರೆಗೆ ಇದು ವಾರ್ಷಿಕ 10 ಸಾವಿರ ಟನ್ ಹಸಿರು ಜಲಜನಕವನ್ನು ಪೂರೈಕೆ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.