ADVERTISEMENT

ಎಲ್‌ಟಿಟಿಎಸ್ ಲಾಭ ಹೆಚ್ಚಳ

ಪಿಟಿಐ
Published 20 ಅಕ್ಟೋಬರ್ 2019, 16:39 IST
Last Updated 20 ಅಕ್ಟೋಬರ್ 2019, 16:39 IST

ಮುಂಬೈ: ಎಲ್‌ಆ್ಯಂಡ್‌ಟಿ ಟೆಕ್ನಾಲಜೀಸ್‌ ಸರ್ವೀಸಸ್‌ ಲಿಮಿಟೆಡ್‌ (ಎಲ್‌ಟಿಟಿಎಸ್) ಕಂಪನಿಯು ಎರಡನೇ ತ್ರೈಮಾಸಿಕದಲ್ಲಿ‌₹ 2,058 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ
ಶೇ 8ರಷ್ಟು ಏರಿಕೆಯಾಗಿದೆ. ವರಮಾನ ಶೇ 11ರಷ್ಟು ಹೆಚ್ಚಾಗಿದ್ದು ₹ 14,021 ಕೋಟಿಗೆ ತಲುಪಿದೆ.

‘ತ್ರೈಮಾಸಿಕದಲ್ಲಿ ವರಮಾನವು ಎರಡಂಕಿ ಪ್ರಗತಿ ಸಾಧಿಸಿರುವುದು ಕಂಪನಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಸಾರಿಗೆ, ಪ್ಲಾಂಟ್‌ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಸಾಧನಗಳ ವಿಭಾಗವು ಶೇ 20ರಷ್ಟು ಬೆಳವಣಿಗೆ ಸಾಧಿಸಿವೆ’ ಎಂದು ಕಂಪನಿಯ ಸಿಇಒ ಕೇಶವ್‌ ಪಾಂಡಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.