ADVERTISEMENT

ರಾಜಾಜಿನಗರದಲ್ಲಿ ಲುಲು ಗ್ಲೋಬಲ್ ಮಾಲ್, 11ಕ್ಕೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 13:34 IST
Last Updated 9 ಅಕ್ಟೋಬರ್ 2021, 13:34 IST
ಗ್ಲೋಬಲ್ ಮಾಲ್
ಗ್ಲೋಬಲ್ ಮಾಲ್   

ಬೆಂಗಳೂರು: ಬಹುರಾಷ್ಟ್ರೀಯ ಉದ್ಯಮ ಸಮೂಹವಾಗಿರುವ ಲುಲು ಗ್ರೂಪ್‌ ಇಂಟರ್‌ನ್ಯಾಷನಲ್‌ ಒಡೆತನದಗ್ಲೋಬಲ್‌ ಮಾಲ್ ರಾಜಾಜಿನಗರದಲ್ಲಿ ಸೋಮವಾರ ಉದ್ಘಾಟನೆ ಆಗಲಿದೆ. ‘ಬೆಂಗಳೂರಿನ ಅತಿದೊಡ್ಡ ಹೈಪರ್‌ಮಾರ್ಕೆಟ್ ಆಗಿರುವ ಲುಲು ಹೈಪರ್‌ಮಾರ್ಕೆಟ್ ಹಾಗೂ ವಿನೂತನ ಮನರಂಜನಾ ತಾಣ ಫಂಟುರಾ ಇಲ್ಲಿರಲಿದೆ. ಇವುಗಳ ಕಾರಣದಿಂದಾಗಿ ಈ ಮಾಲ್‌ ನಗರದ ದೊಡ್ಡ ಆಕರ್ಷಣೆಯಾಗಿ ಬೆಳೆಯಲಿದೆ’ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

ರಾಜಾಜಿನಗರದಲ್ಲಿನ 14 ಎಕರೆ ಜಾಗದಲ್ಲಿ ಇದು ನಿರ್ಮಾಣ ಆಗಿದೆ. ಐದು ಮಹಡಿಗಳ ಈ ಮಾಲ್‌ನಲ್ಲಿ 132 ಅಂಗಡಿಗಳು, 17 ಕಿಯೋಸ್ಕ್‌ಗಳು ಇರಲಿವೆ. ಸಿದ್ಧ ಉಡುಪುಗಳು, ಆಭರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ರೆಸ್ಟಾರೆಂಟ್‌ಗಳು, ಕೆಫೆಗಳು ಇಲ್ಲಿರಲಿವೆ. ಲುಲು ಹೈಪರ್‌ಮಾರ್ಕೆಟ್‌ 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಇರಲಿದೆ.

ಫಂಟುರಾ ಕೇಂದ್ರವು 60 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿದೆ. ಇದು ದೇಶದ ಅತಿದೊಡ್ಡ ಒಳಾಂಗಣ ಮೋಜಿನ ತಾಣ ಆಗಲಿದೆ ಎಂದು ಕಂಪನಿ ಹೇಳಿದೆ. ಒಂದು ಬಾರಿಗೆ ಒಂದು ಸಾವಿರ ಜನ ಕುಳಿತುಕೊಳ್ಳಬಹುದಾದ ಫುಡ್‌ ಕೋರ್ಟ್‌ ಕೂಡ ಇಲ್ಲಿ ಇರಲಿದೆ. ಸೋಮವಾರ ಸಂಜೆ ಐದು ಗಂಟೆಯಿಂದ ಈ ಮಾಲ್‌ ಗ್ರಾಹಕರಿಗೆ ಮುಕ್ತವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.