ADVERTISEMENT

ರಾಜಾಜಿನಗರದಲ್ಲಿ ಗ್ಲೋಬಲ್‌ ಮಾಲ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 19:44 IST
Last Updated 11 ಅಕ್ಟೋಬರ್ 2021, 19:44 IST
ಗ್ಲೋಬಲ್ ಮಾಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಡಿ.ಕೆ.ಶಿವಕುಮಾರ್‌, ಲುಲು ಸಮೂಹದ ಸಿಎಂಡಿ ಯೂಸುಫ್‌ ಅಲಿ ಮತ್ತು ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ
ಗ್ಲೋಬಲ್ ಮಾಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಡಿ.ಕೆ.ಶಿವಕುಮಾರ್‌, ಲುಲು ಸಮೂಹದ ಸಿಎಂಡಿ ಯೂಸುಫ್‌ ಅಲಿ ಮತ್ತು ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ   

ಬೆಂಗಳೂರು: ಬಹುರಾಷ್ಟ್ರೀಯ ಉದ್ಯಮ ಸಮೂಹವಾಗಿರುವ ಲುಲು ಗ್ರೂಪ್‌ ಇಂಟರ್‌ನ್ಯಾಷನಲ್‌ ಒಡೆತನದ ರಾಜಾಜಿನಗರದಲ್ಲಿನ ಗ್ಲೋಬಲ್‌ ಮಾಲ್ ಅನ್ನು ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ ಅವರು ಸೋಮವಾರ ಉದ್ಘಾಟಿಸಿದರು.

ಬೆಂಗಳೂರಿನ ಅತಿದೊಡ್ಡ ಹೈಪರ್‌ಮಾರ್ಕೆಟ್ ಆಗಿರುವ ಲುಲು ಹೈಪರ್‌ಮಾರ್ಕೆಟ್ ಹಾಗೂ ವಿನೂತನ ಮನರಂಜನಾ ತಾಣ ಫಂಟುರಾ ಇಲ್ಲಿದೆ ಎಂದು ಕಂಪನಿಯು ತಿಳಿಸಿದೆ.

‘ಭಾರತದಲ್ಲಿ ಯವುದೇ ಯೋಜನೆಯಾದರೂ ನಮಗೆ ವಿಶೇಷವಾಗಿರುತ್ತದೆ. ಬೆಂಗಳೂರಿನ ನಿವಾಸಿಗಳಿಗೆ ವಿಶ್ವ ದರ್ಜೆಯ ಶಾಪಿಂಗ್‌ ಅನುಭವ ನೀಡುವ ಸಲುವಾಗಿ ನಮ್ಮ ಅಂತರರಾಷ್ಟ್ರೀಯ ಪರಿಣತಿಯನ್ನು ಅಳವಡಿಸಿಕೊಳ್ಳಲಾಗಿದೆ. ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಖರೀದಿಸುವ ಜೊತೆಗೆ ಸ್ನೇಹಪರ ಸೇವೆಯೂ ಇಲ್ಲಿ ಇರಲಿದೆ ಎಂದು ಲುಲು ಸಮೂದ ಸಿಎಂಡಿ ಎಂ.ಎ. ಯೂಸುಫ್‌ ಅಲಿ ಅವರು ಹೇಳಿದರು.

ADVERTISEMENT

ಈ ಹೈಪರ್‌ ಮಾರ್ಕೇಟ್‌ನಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶವನ್ನು ಹೆಚ್ಚಿಸಲು, ಕರ್ನಾಟಕ ಆಧಾರಿತ ಕೃಷಿ ಮತ್ತು ವ್ಯಾಪಾರ ವಲಯಗಳನ್ನು ಬೆಂಬಲಿಸಲು ಉತ್ತಮ ಉತ್ತೇಜಿಜಸಲು ವಿಶೇಷ ವಿಭಾಗಗಳನ್ನು ಹೊಂದಿದ್ದೇವೆ ಎಂದು ಅವರು ವಿವರಿಸಿದರು.

ರಾಜಾಜಿನಗರದಲ್ಲಿನ 14 ಎಕರೆ ಜಾಗದಲ್ಲಿ ಇದು ನಿರ್ಮಾಣ ಆಗಿದೆ. ಐದು ಮಹಡಿಗಳ ಈ ಮಾಲ್‌ನಲ್ಲಿ 132 ಅಂಗಡಿಗಳು, 17 ಕಿಯೋಸ್ಕ್‌ಗಳು ಇವೆ. ಸಿದ್ಧ ಉಡುಪುಗಳು, ಆಭರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ರೆಸ್ಟಾರೆಂಟ್‌ಗಳು, ಕೆಫೆಗಳನ್ನು ಹೊಂದಿದೆ. ಲುಲು ಹೈಪರ್‌ಮಾರ್ಕೆಟ್‌ 2 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿದೆ ಹಾಗೂ ಅತಿದೊಡ್ಡ ಒಳಾಂಗಣ ಮನರಂಜನಾ ಕೇಂದ್ರವಾದಫಂಟುರಾ 60 ಸಾವಿರ ಚದರ ಅಡಿಯಲ್ಲಿ ಎಂದು ಕಂಪನಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.