ADVERTISEMENT

ಸಿರಿವಂತ ಕುಟುಂಬಗಳು: ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

ಪಿಟಿಐ
Published 16 ಮಾರ್ಚ್ 2021, 15:43 IST
Last Updated 16 ಮಾರ್ಚ್ 2021, 15:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದಲ್ಲಿನ ಸಿರಿವಂತ ಕುಟುಂಬಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಹುರುನ್‌ ಇಂಡಿಯಾದ ವರದಿಯ ಪ್ರಕಾರ, 2020ರಲ್ಲಿ ದೇಶದಲ್ಲಿರುವ ಒಟ್ಟಾರೆ 4.12 ಲಕ್ಷ ಸಿರಿವಂತ ಕುಟುಂಬಗಳಿದ್ದು, ಅದರಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಗುಜರಾತ್‌ ರಾಜ್ಯಗಳ ಪಾಲು ಶೇ 46ರಷ್ಟಿದೆ.

ಕುಟುಂಬವೊಂದರ ವಾರ್ಷಿಕ ವರಮಾನವು ₹ 7.2 ಕೋಟಿಗಿಂತಲೂ ಅಧಿಕ ಇದ್ದರೆ ಅಂತಹ ಕುಟುಂಬವನ್ನು ಸಿರಿವಂತ ಕುಟುಂಬ ಎಂದು ಪರಿಗಣಿಸಲಾಗುತ್ತದೆ.

ADVERTISEMENT

ಸಿರಿವಂತ ಕುಟುಂಬಗಳು ಎಷ್ಟು?

ಮಹಾರಾಷ್ಟ್ರ-56 ಸಾವಿರ

ಉತ್ತರ ಪ್ರದೇಶ- 36 ಸಾವಿರ

ತಮಿಳುನಾಡು-35 ಸಾವಿರ

ಕರ್ನಾಟಕ-33 ಸಾವಿರ

ಗುಜರಾತ್-29 ಸಾವಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.