ADVERTISEMENT

ಮಹೀಂದ್ರ ಲಾಭ ಎಂಟು ಪಟ್ಟು ಹೆಚ್ಚಳ

ಪಿಟಿಐ
Published 9 ನವೆಂಬರ್ 2021, 11:03 IST
Last Updated 9 ನವೆಂಬರ್ 2021, 11:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯತೆರಿಗೆ ನಂತರದ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹ 1,432 ಕೋಟಿ ಆಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 162 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಎಂಟು ಪಟ್ಟಿಗಿಂತ ತುಸು ಹೆಚ್ಚಾಗಿದೆ ಎಂದು ಕಂಪನಿಯು ತಿಳಿಸಿದೆ.

ಕಂಪನಿಯ ವರಮಾನವು ₹ 11,590 ಕೋಟಿಯಿಂದ ₹ 13,305 ಕೋಟಿಗೆ, ಅಂದರೆ ಶೇಕಡ 15ರಷ್ಟು, ಏರಿಕೆ ಕಂಡಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ತ್ರೈಮಾಸಿಕದಲ್ಲಿ ಕಂಪನಿಯು 99,334 ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 91,536 ವಾಹನಗಳನ್ನು ಮಾರಾಟ ಮಾಡಿತ್ತು. ಇದಕ್ಕೆ ಹೋಲಿಸಿದರೆ ಶೇ 9ರಷ್ಟು ಏರಿಕೆ ಆಗಿದೆ. ಆದರೆ, ಟ್ರ್ಯಾಕ್ಟರ್‌ ಮಾರಾಟವು ಶೇ 5ರಷ್ಟು ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.