ADVERTISEMENT

ಮಹೀಂದ್ರ: 14ರಿಂದ ಬುಕಿಂಗ್‌ ಆರಂಭ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 15:25 IST
Last Updated 10 ಫೆಬ್ರುವರಿ 2025, 15:25 IST
ವಾಹನ ತಯಾರಿಕ ಕಂಪನಿ ಮಹೀಂದ್ರ ಆ್ಯಂಡ್ ಮಹೀಂದ್ರ ಹೊಸ ವಿದ್ಯುತ್‌ಚಾಲಿತ ವಾಹನಗಳನ್ನು ಬಿಡುಗಡೆ ಮಾಡಿದೆ
ವಾಹನ ತಯಾರಿಕ ಕಂಪನಿ ಮಹೀಂದ್ರ ಆ್ಯಂಡ್ ಮಹೀಂದ್ರ ಹೊಸ ವಿದ್ಯುತ್‌ಚಾಲಿತ ವಾಹನಗಳನ್ನು ಬಿಡುಗಡೆ ಮಾಡಿದೆ   

ಬೆಂಗಳೂರು: ವಾಹನ ತಯಾರಿಕ ಕಂಪನಿ ಮಹೀಂದ್ರ ಆ್ಯಂಡ್ ಮಹೀಂದ್ರದ ಹೊಸ ವಿದ್ಯುತ್‌ಚಾಲಿತ ವಾಹನಗಳ ಬುಕಿಂಗ್‌ ಫೆಬ್ರುವರಿ 14ರಿಂದ ಆರಂಭವಾಗಲಿದೆ.

ಎಕ್ಸ್‌ಇವಿ 9ಇ ಮತ್ತು ಬಿಇ6 ಹೊಸ ಮಾದರಿಯ ವಾಹನಗಳಾಗಿವೆ ಎಂದು ಕಂಪನಿ ತಿಳಿಸಿದೆ.

59 ಕೆಡಬ್ಲ್ಯುಎಚ್ ಮತ್ತು 79 ಕೆಡಬ್ಲ್ಯುಎಚ್ ಬ್ಯಾಟರಿಗಳನ್ನು ಹೊಂದಿದೆ. ಬಿಇ6 ಬೆಲೆ ₹18.90 ಲಕ್ಷ ಮತ್ತು ಎಕ್ಸ್‌ಇವಿ 9ಇ ₹21.90 ಲಕ್ಷದಿಂದ ಆರಂಭವಾಗುತ್ತದೆ. ಗ್ರಾಹಕರು ತಮಗೆ ಬೇಕಾದ ಕಾರಿನ ಮಾದರಿಯನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. 

ADVERTISEMENT

ಮಹೀಂದ್ರದ ಎಲೆಕ್ಟ್ರಿಕ್ ಒರಿಜಿನ್ ಎಸ್‌ಯುವಿಗಳು ಸುರಕ್ಷತಾ ಮಾನದಂಡ, ತಂತ್ರಜ್ಞಾನ, ವೈಶಿಷ್ಟ್ಯವನ್ನು ಒಳಗೊಂಡಿದೆ. ಗ್ರಾಹಕರ ಆದ್ಯತೆಗೆ ತಕ್ಕಂತೆ ವಾಹನಗಳನ್ನು ತಯಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.