
ಬೆಂಗಳೂರು: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು, ಎಕ್ಸ್‌ಇವಿ 9ಎಸ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ವಾಹನವು ಏಳು ಆಸನಗಳನ್ನು ಹೊಂದಿರುವ ದೇಶದ ಮೊದಲ ವಿದ್ಯುತ್ ಚಾಲಿತ ಎಸ್‌ಯುವಿ ಆಗಿದೆ ಎಂದು ಕಂಪನಿ ಗುರುವಾರ ತಿಳಿಸಿದೆ. ವಾಹನದ ಆರಂಭಿಕ ಬೆಲೆ ₹19.95 ಲಕ್ಷ.
ಈ ವಾಹನ ಆರು ಮಾದರಿಗಳನ್ನು ಹೊಂದಿದೆ. 2026ರ ಜನವರಿ 14ರಿಂದ ವಾಹನದ ಬುಕಿಂಗ್ ಆರಂಭವಾಗಲಿದ್ದು, ಜನವರಿ 23ರಿಂದ ವಾಹನಗಳ ವಿತರಣೆ ಮಾಡಲಾಗುವುದು ಎಂದು ತಿಳಿಸಿದೆ.
2027ರ ಅಂತ್ಯದೊಳಗೆ ಕಂಪನಿಯು 1,000ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.
‘ಪ್ರಸ್ತುತ ತಿಂಗಳಿಗೆ 4 ಸಾವಿರದಿಂದ 5 ಸಾವಿರ ವಿದ್ಯುತ್‌ಚಾಲಿತ ವಾಹನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ 7 ಸಾವಿರಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದು ಕಂಪನಿಯ ವಾಹನ ಮತ್ತು ಕೃಷಿ ವಾಹನಗಳ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾಜೇಶ್ ಜೆಜುರಿಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.