ADVERTISEMENT

ಮಹೀಂದ್ರ ಎಕ್ಸ್‌ಯುವಿ 700: ಸುರಕ್ಷತೆಯಲ್ಲಿ ‘5 ಸ್ಟಾರ್‌’ ಶ್ರೇಯಾಂಕ

ಪಿಟಿಐ
Published 10 ನವೆಂಬರ್ 2021, 15:24 IST
Last Updated 10 ನವೆಂಬರ್ 2021, 15:24 IST

ನವದೆಹಲಿ: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ಈಚೆಗೆ ಬಿಡುಗಡೆ ಮಾಡಿರುವ ಎಕ್ಸ್‌ಯುವಿ700, ವಯಸ್ಕ ಪ್ರಯಾಣಿಕರ ಸುರಕ್ಷತೆಯ ಮಾನದಂಡಗಳಲ್ಲಿ 5–ಸ್ಟಾರ್ ಶ್ರೇಯಾಂಕ ಪಡೆದಿದೆ ಎಂದು ಕಂಪನಿಯು ಬುಧವಾರ ಹೇಳಿದೆ.

ಈ ವಾಹನವು ವಯಸ್ಕರು ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ 66 ಅಂಕಗಳಲ್ಲಿ 57.69ರಷ್ಟು ಅಂಕ ಪಡೆದಿದ್ದು, ಜಾಗತಿಕವಾಗಿ ಪರೀಕ್ಷೆಗೆ ಒಳಗಾದ ಭಾರತದ ವಾಹನವೊಂದು ಪಡೆದಿರುವ ಗರಿಷ್ಠ ಅಂಕ ಇದು ಎಂದು ಕಂಪನಿ ಹೇಳಿದೆ.

ಕಾರ್ಯಸಾಮರ್ಥ್ಯ ಮತ್ತು ವೈಶಿಷ್ಟ್ಯಗಳ ದೃಷ್ಟಿಯಿಂದಷ್ಟೇ ಅಲ್ಲದೆ, ಸುರಕ್ಷತೆಯ ನಿಟ್ಟಿನಲ್ಲಿಯೂ ಮಹೀಂದ್ರ ಕಂಪನಿಯು ಎಸ್‌ಯುವಿ ವಿಭಾಗಕ್ಕೆ ಹೊಸ ರೂಪ ನೀಡುತ್ತಿದೆ ಎಂದು ಕಂಪನಿಯ ಜಾಗತಿಕ ಉತ್ಪನ್ನಗಳ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ವೇಲುಸ್ವಾಮಿ ಆರ್‌. ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.