ADVERTISEMENT

ಮಲಬಾರ್: ಕಲಾತ್ಮಕ ಆಭರಣಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 18:50 IST
Last Updated 22 ಜನವರಿ 2021, 18:50 IST

ಬೆಂಗಳೂರು: ಮಲಬಾರ್ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ವತಿಯಿಂದ ‘ಕಲಾತ್ಮಕ ಆಭರಣಗಳ ಪ್ರದರ್ಶನ ಮತ್ತು ಮಾರಾಟ’ವನ್ನುಕೋರಮಂಗಲ ಶಾಖೆಯ ಮಳಿಗೆಯಲ್ಲಿಜ.24ರವರೆಗೆ ಏರ್ಪಡಿಸಲಾಗಿದೆ.

ಪ್ರದರ್ಶನದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಉಪ ಬ್ರಾಂಡ್‌ಗಳಾದ ಮೈನ್ ಡೈಮಂಡ್ ಜ್ಯುವೆಲ್ಲರಿ, ಇಆರ್‌ಎ ಕತ್ತರಿಸದ ವಜ್ರದ ಆಭರಣಗಳು, ದೈವಿಕ ಭಾರತೀಯ ಪರಂಪರೆಯ ಆಭರಣಗಳು, ಕರಕುಶಲ ಆಭರಣಗಳು, ಅಮೂಲ್ಯ ರತ್ನದ ಆಭರಣಗಳು ಮತ್ತು ಸ್ಟಾರ್ಲೆಟ್ ಮಕ್ಕಳ ಆಭರಣಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಈ ಅವಧಿಯಲ್ಲಿ ವಜ್ರದ ಮೌಲ್ಯದಲ್ಲಿಗ್ರಾಹಕರು ಶೇ 20ವರೆಗೆ ರಿಯಾಯಿತಿ ಪಡೆಯಬಹುದು. ಮುಂಗಡವಾಗಿ ಶೇ 10ಕ್ಕಿಂತ ಮೇಲ್ಪಟ್ಟು ಪಾವತಿಸಿ , ಆಭರಣಗಳನ್ನು ಬುಕ್ ಮಾಡುವ ವ್ಯವಸ್ಥೆಯೂ ಇದೆ.

ADVERTISEMENT

ಮಲಬಾರ್‌ ಸಮೂಹದ ಅಧ್ಯಕ್ಷ ಎ.ಪಿ.ಅಹಮ್ಮದ್, ‘ಕುಶಲಕರ್ಮಿಗಳ ಆಭರಣ ಸೃಷ್ಟಿ ಹಾಗೂ ಅವರ ಪರಿಣಿತಿ, ಕೌಶಲಗಳನ್ನು ಪ್ರದರ್ಶನದಲ್ಲಿ ಕಾಣಬಹುದು. ಆಭರಣ ಪ್ರಿಯರ ಗ್ರಹಿಕೆಗೆ ಸರಿಹೊಂದುವ ಕರಕುಶಲತೆ ಇಲ್ಲಿ ಅಭಿವ್ಯಕ್ತಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.