ADVERTISEMENT

ಮಲಬಾರ್‌ನಿಂದ ‘ಆರ್ಟಿಸ್ಟ್ರಿ’ ಚಿನ್ನಾಭರಣ ಮೇಳ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 20:13 IST
Last Updated 4 ಅಕ್ಟೋಬರ್ 2020, 20:13 IST
ಮಲಬಾರ್‌ ಕಂಪನಿಯ ಜಯನಗರದ ಮಳಿಗೆಯಲ್ಲಿ ‘ಆರ್ಟಿಸ್ಟ್ರಿ’ ಮೇಳದ ಅಂಗವಾಗಿ ಇಟ್ಟಿರುವ ಚಿನ್ನಾಭರಣಗಳನ್ನು ಪ್ರದರ್ಶಿಸಿದ ರೂಪದರ್ಶಿಗಳು
ಮಲಬಾರ್‌ ಕಂಪನಿಯ ಜಯನಗರದ ಮಳಿಗೆಯಲ್ಲಿ ‘ಆರ್ಟಿಸ್ಟ್ರಿ’ ಮೇಳದ ಅಂಗವಾಗಿ ಇಟ್ಟಿರುವ ಚಿನ್ನಾಭರಣಗಳನ್ನು ಪ್ರದರ್ಶಿಸಿದ ರೂಪದರ್ಶಿಗಳು   

ಬೆಂಗಳೂರು: ದೇಶದ ಪ್ರತಿಷ್ಠಿತ ಚಿನ್ನ, ವಜ್ರಾಭರಣಗಳ ಮಾರಾಟ ಕಂಪನಿ ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್ ತನ್ನ ಜಯನಗರ ಮಳಿಗೆಯಲ್ಲಿ ‘ಆರ್ಟಿಸ್ಟ್ರಿ’ ನೂತನ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದೆ.

ಅಮೂಲ್ಯ ಮುತ್ತು–ರತ್ನ, ಹವಳ ಗಳನ್ನು ಬಳಸಿದ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹವನ್ನು ಗ್ರಾಹಕರು ಕಣ್ತುಂಬಿಕೊಳ್ಳಬಹುದು. ಅ.11ರವರೆಗೆ ಈ ಮೇಳ ಇರಲಿದೆ.

ಮಲಬಾರ್‌ ಕಂಪನಿಯ ಬ್ರ್ಯಾಂಡ್‌ಗಳಾದ ಮೈನ್‌ ಡೈಮಂಡ್, ಎರಾ ಅನ್‌ಕಟ್‌, ಡಿವೈನ್‌ ಇಂಡಿಯನ್‌ ಹೆರಿಟೇಜ್, ಎತ್ನಿಕ್ಸ್, ಪ್ರೀಶಿಯಾದ ಚಿನ್ನಾಭರಣಗಳೂ ಮೇಳದಲ್ಲಿಪ್ರದರ್ಶನಗೊಳ್ಳಲಿವೆ. ಮೇಳದ ಅಂಗವಾಗಿ ತಯಾರಿಕೆ ಶುಲ್ಕದ ಪೈಕಿ ಪ್ರತಿ ಗ್ರಾಂಗೆ ₹150 ಕಡಿತ ಮಾಡಲಾಗುತ್ತದೆ. ವಜ್ರಾಭರಣಗಳ ಮೌಲ್ಯದ ಮೇಲೆ ಶೇ 20ರಷ್ಟು ರಿಯಾಯಿತಿ ನೀಡ ಲಾಗುವುದು ಎಂದು ಕಂಪನಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.