ಬೆಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕಂಪನಿಯು ಬ್ರಿಟನ್ನಿನಲ್ಲಿ ಹೊಸ ಮಳಿಗೆ ಆರಂಭಿಸಿರುವುದರ ವಿರುದ್ಧ ಪ್ರಕಟಿಸಲಾದ ಎಲ್ಲ ಅಪಮಾನಕರ ಪೋಸ್ಟ್‌ಗಳನ್ನು ಮತ್ತು ದುರುದ್ದೇಶದ ವಿವರಗಳನ್ನು ತೆಗೆಯಬೇಕು ಎಂದು ಸಾಮಾಜಿಕ ಜಾಲತಾಣಗಳಿಗೆ ಹಾಗೂ ಸುದ್ದಿಸಂಸ್ಥೆಗಳಿಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಲಂಡನ್‌ನಲ್ಲಿ ತನ್ನ ಬ್ರ್ಯಾಂಡ್‌ನ ಪ್ರಚಾರಕ್ಕೆ ಅಲ್ಲಿನ ಸಾಮಾಜಿಕ ಜಾಲತಾಣ ಇನ್‌ಫ್ಲ್ಯುಯೆನ್ಸರ್ ಸೇವೆಯನ್ನು ಬಳಸಿಕೊಂಡ ಕಂಪನಿಯ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ದುರುದ್ದೇಶದಿಂದ ಅಭಿಯಾನ ನಡೆಸಲಾಯಿತು. ಈ ಅಭಿಯಾನ ವಿರುದ್ಧ ಕಂಪನಿಯು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದರ ವಿಚಾರಣೆ ನಡೆಸಿದ ಹೈಕೋರ್ಟ್, ಕೆಲವು ಮಾಧ್ಯಮ ಸಮೂಹಗಳು ಹಾಗೂ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ತಮ್ಮಿಂದ ಅಂತಹ ಮಾನಹಾನಿಕರ ಸುದ್ದಿ ಮತ್ತು ವರದಿಗಳನ್ನು ಹಿಂಪಡೆಯಲು ಮಧ್ಯಂತರ ಆದೇಶವನ್ನು ನೀಡಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.