ADVERTISEMENT

ಮಾರುಕಟ್ಟೆ ಮೌಲ್ಯ: ರಿಲಯನ್ಸ್‌, ಟಿಸಿಎಸ್‌ ಗರಿಷ್ಠ ಗಳಿಕೆ

ಪಿಟಿಐ
Published 5 ಜುಲೈ 2020, 14:38 IST
Last Updated 5 ಜುಲೈ 2020, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಷೇರುಪೇಟೆಯಲ್ಲಿ ನೋಂದಾಯಿತ ಪ್ರಮುಖ 19 ಕಂಪನಿಗಳ ಮಾರುಕಟ್ಟೆ ಮೌಲ್ಯವು ಹಿಂದಿನ ವಾರ ₹ 1.37 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಟಿಸಿಎಸ್‌ ಮತ್ತು ಆರ್‌ಐಎಲ್‌ ಅತಿ ಹೆಚ್ಚಿನ ಗಳಿಕೆ ಕಂಡಿವೆ.

ಹಿಂದಿನ ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ 850 (ಶೇ 2.41) ಅಂಶಗಳಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿಯೂ ಏರಿಕೆಯಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್ (ಆರ್‌ಐಎಲ್‌) ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಟಿಸಿಎಸ್‌ ಎರಡನೇ ಸ್ಥಾನದಲ್ಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಯುಎಲ್‌, ಎಚ್‌ಡಿಎಫ್‌ಸಿ, ಇನ್ಫೊಸಿಸ್‌, ಭಾರ್ತಿ ಏರ್‌ಟೆಲ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಐಟಿಸಿ ಮತ್ತು ಐಸಿಐಸಿಐ ಬ್ಯಾಂಕ್‌ ನಂತರದ ಸ್ಥಾನದಲ್ಲಿವೆ.

ADVERTISEMENT

ಮಾರುಕಟ್ಟೆ ಮೌಲ್ಯದಲ್ಲಿ ಏರಿಕೆ

ಕಂಪನಿ;ಏರಿಕೆ (ಕೋಟಿಗಳಲ್ಲಿ);ಒಟ್ಟಾರೆ ಮೌಲ್ಯ(ಲಕ್ಷ ಕೋಟಿಗಳಲ್ಲಿ)

ಆರ್‌ಐಎಲ್‌; ₹28,464; ₹ 11.33

ಟಿಸಿಎಸ್‌;₹31,295;₹8.25

ಎಚ್‌ಡಿಎಫ್‌ಸಿ ಬ್ಯಾಂಕ್;₹10,211;₹5.89

ಎಚ್‌ಯುಎಲ್‌;₹4,194;₹5.10

ಎಚ್‌ಡಿಎಫ್‌ಸಿ;₹20,520;₹3.27

ಇನ್ಫೊಸಿಸ್‌;₹6,154;₹3.24

ಭಾರ್ತಿ ಏರ್‌ಟೆಲ್‌;₹11,347;₹3.17

ಕೋಟಕ್‌ ಮಹೀಂದ್ರಾ ಬ್ಯಾಂಕ್‌;₹2,483;₹ 2.67

ಐಟಿಸಿ;₹15,058;₹2.54

ಐಸಿಐಸಿಐ ಬ್ಯಾಂಕ್;₹7,780;₹2.33

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.