ADVERTISEMENT

ನಾಲ್ಕನೆಯ ದಿನವೂ ಇಳಿದ ಷೇರು ಸೂಚ್ಯಂಕ

ಪಿಟಿಐ
Published 19 ಫೆಬ್ರುವರಿ 2021, 16:36 IST
Last Updated 19 ಫೆಬ್ರುವರಿ 2021, 16:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 434 ಅಂಶ ಇಳಿಕೆ ಕಂಡಿದೆ. ನಿಫ್ಟಿ 137 ಅಂಶ ಇಳಿಕೆ ದಾಖಲಿಸಿತು. ಷೇರು ಮಾರುಕಟ್ಟೆಯಲ್ಲಿ ಸತತ ನಾಲ್ಕನೆಯ ದಿನವೂ ಷೇರುಗಳ ಮಾರಾಟ ಹೆಚ್ಚಿತ್ತು.

ಸೆನ್ಸೆಕ್ಸ್‌ನಲ್ಲಿ ಬ್ಯಾಂಕಿಂಗ್‌ ಮತ್ತು ಆಟೊಮೊಬೈಲ್‌ ವಲಯದ ಷೇರುಗಳ ಮಾರಾಟ ಹೆಚ್ಚಿತ್ತು. ಶುಕ್ರವಾರ ಒಎನ್‌ಜಿಸಿ ಷೇರುಗಳು ಅತಿಹೆಚ್ಚಿನ ಕುಸಿತ ಕಂಡವು. ಎಸ್‌ಬಿಐ, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಆಟೊ, ಮಾರುತಿ, ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಕೂಡ ಇಳಿಕೆ ಕಂಡವು.

ಇಂಡಸ್‌ಇಂಡ್‌ ಬ್ಯಾಂಕ್, ಎಚ್‌ಯುಎಲ್‌, ಡಾ ರೆಡ್ಡೀಸ್, ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಜಾಜ್ ಫಿನ್‌ಸರ್ವ್‌ ಷೇರುಗಳು ಏರಿಕೆ ಕಂಡವು.

ADVERTISEMENT

ಶುಕ್ರವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ ಶೇ 1.24ರಷ್ಟು ಕಡಿಮೆ ಆಗಿದ್ದು, ಬ್ಯಾರೆಲ್‌ಗೆ 63.14 ಅಮೆರಿಕನ್‌ ಡಾಲರ್‌ನಂತೆ ಮಾರಾಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.