ADVERTISEMENT

ಸಿಎನ್‌ಜಿ ವಾಹನ ಮಾರುಕಟ್ಟೆ ವಿಸ್ತರಣೆಗೆ ಮಾರುತಿ ಆದ್ಯತೆ

ಪಿಟಿಐ
Published 21 ಫೆಬ್ರುವರಿ 2021, 16:15 IST
Last Updated 21 ಫೆಬ್ರುವರಿ 2021, 16:15 IST

ನವದೆಹಲಿ: ‘ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಆಗುತ್ತಿರುವ ನಡುವೆಯೇಮಾರುತಿ ಸುಜುಕಿ ಇಂಡಿಯಾದ ಸಿಎನ್‌ಜಿ ವಾಹನಗಳ ಬೇಡಿಕೆ ಹೆಚ್ಚುತ್ತಿದ್ದು ಇದರ ಪ್ರಯೋಜನ ಪ‍ಡೆದುಕೊಳ್ಳಲು ಕಂಪನಿಯು ಮುಂದಾಗಿದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಿಎನ್‌ಜಿ ವಾಹನಗಳಲ್ಲಿ ಶೇಕಡ 50ರಷ್ಟು ಬೆಳವಣಿಗೆಯನ್ನು ಕಂಪನಿ ನಿರೀಕ್ಷಿಸುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ 14 ಮಾದರಿಗಳ ಪೈಕಿ ಎಂಟರಲ್ಲಿ ಸಿಎನ್‌ಜಿ ಆಯ್ಕೆ ಇದ್ದು, ಈ ವಿಭಾಗದಲ್ಲಿ ವಹಿವಾಟು ವಿಸ್ತರಣೆಗೆ ಕಂಪನಿ ಮುಂದಾಗಿದೆ.

‘ಏಪ್ರಿಲ್‌–ಜನವರಿ ಅವಧಿಯಲ್ಲಿ ಸಿಎನ್‌ಜಿ ವಾಹನಗಳ ಉದ್ಯಮವು ಶೇ 37ರಷ್ಟು ಬೆಳವಣಿಗೆ ಕಂಡಿದೆ. ಸಿಎನ್‌ಜಿ ಉತ್ತಮ ಬೆಳವಣಿಗೆ ಕಾಣುತ್ತಿದೆ ಎನ್ನುವುದು ಇದರ ಅರ್ಥ’ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

ADVERTISEMENT

‘ಪ್ರತಿ ಒಂದು ಕಿ.ಮೀ.ಗೆಸಿಎನ್‌ಜಿ ವೆಚ್ಚವು ₹ 1.5ರಷ್ಟು ಆಗುತ್ತದೆ. ಅದೇ ಪೆಟ್ರೋಲ್‌ ಮತ್ತು ಡೀಸೆಲ್‌ ವೆಚ್ಚ ಪ್ರತಿ ಒಂದು ಕಿ.ಮೀ.ಗೆ ₹ 4ರಷ್ಟಾಗುತ್ತದೆ. ಹೀಗಾಗಿ ಜನ ಸಿಎನ್‌ಜಿ ವಾಹನ ಆಯ್ಕೆ ಮಾಡಿಕೊಳ್ಳುತ್ತಿದ್ದು, ಇವುಗಳ ಮಾರಾಟ ಹೆಚ್ಚಾಗಲು ಕಾರಣವಾಗಿದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.