ADVERTISEMENT

ಮಾರುತಿ: ಫೆಬ್ರುವರಿತಯಾರಿಕೆ ಕಡಿತ

ಪಿಟಿಐ
Published 19 ಮಾರ್ಚ್ 2019, 18:15 IST
Last Updated 19 ಮಾರ್ಚ್ 2019, 18:15 IST

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಫೆಬ್ರುವರಿಯಲ್ಲಿ ಶೇ 8ರಷ್ಟು ವಾಹನ ತಯಾರಿಕೆಯನ್ನು ಕಡಿತಗೊಳಿಸಿದೆ.

ಬೇಡಿಕೆಯಲ್ಲಿ ಇಳಿಕೆ ಕಂಡುಬಂದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಫೆಬ್ರುವರಿಯಲ್ಲಿ 1,62,524 ವಾಹನಗಳನ್ನು ತಯಾರಿಸಲಾಗಿದೆ. 2018ರ ಫೆಬ್ರುವರಿಗೆ ಹೋಲಿಸಿದರೆ ತಯಾರಿಕೆಯಲ್ಲಿ ಶೇ 8ರಷ್ಟು ಕಡಿಮೆ ತಯಾರಿಸಲಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಜನವರಿಯಲ್ಲಿ 1,48,959 ವಾಹನಗಳನ್ನು ತಯಾರಿಸಿತ್ತು. ಇದು 2018ರ ಜನವರಿಯಲ್ಲಿನ ತಯಾರಿಕೆಗಿಂತಲೂ ಶೇ 15.6ರಷ್ಟು ಹೆಚ್ಚಿಗೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.