ADVERTISEMENT

ಮಾರುತಿ ಲಾಭ ಶೇ 32 ಇಳಿಕೆ

ಪಿಟಿಐ
Published 27 ಜುಲೈ 2019, 19:45 IST
Last Updated 27 ಜುಲೈ 2019, 19:45 IST
   

ನವದೆಹಲಿ: ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿ, ಮಾರುತಿ ಸುಜುಕಿ ಇಂಡಿಯಾ ಮೊದಲ ತ್ರೈಮಾಸಿಕದಲ್ಲಿ ₹ 1,376 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿದ್ದ ₹ 2,015 ಕೋಟಿ ಲಾಭಕ್ಕೆ ಹೋಲಿಸಿದರೆ ಈ ಬಾರಿ ಲಾಭದಲ್ಲಿ ಶೇ 32ರಷ್ಟು ಇಳಿಕೆಯಾಗಿದೆ.

ಮಾರಾಟದಲ್ಲಿ ಇಳಿಕೆ ಮತ್ತು ತಯಾರಿಕಾ ವೆಚ್ಚದಲ್ಲಿನ ಏರಿಕೆಯಿಂದಾಗಿ ಲಾಭದಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದೆ.

ADVERTISEMENT

ತ್ರೈಮಾಸಿಕದಲ್ಲಿ ಕಂಪನಿ ವರಮಾನ ₹ 21,813 ಕೋಟಿಯಿಂದ ₹ 18,738 ಕೋಟಿಗೆ, ಶೇ 14ರಷ್ಟು ಇಳಿಕೆಯಾಗಿದೆ.

ತ್ರೈಮಾಸಿಕದಲ್ಲಿ ಒಟ್ಟಾರೆ 4,02,594 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗಿಂತಲೂ ಶೇ 17.9ರಷ್ಟು ಇಳಿಕೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.