ADVERTISEMENT

ಕಾರು ಮಾರಾಟ: ಮಾರುತಿ ಮೈಲುಗಲ್ಲು

ಪಿಟಿಐ
Published 30 ನವೆಂಬರ್ 2019, 16:55 IST
Last Updated 30 ನವೆಂಬರ್ 2019, 16:55 IST

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು 2 ಕೋಟಿಗೂ ಅಧಿಕ ಪ್ರಯಾಣಿಕ ವಾಹನಗಳನ್ನು (ಪಿವಿ) ಮಾರಾಟ ಮಾಡಿದೆ.

1983ರ ಡಿಸೆಂಬರ್‌ 14ರಂದು ಮೊದಲ ಕಾರು ಮಾರುತಿ 800 ಮಾರಾಟ ಮಾಡಲಾಗಿತ್ತು. ಆ ಬಳಿಕ 37 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಈ ಸಾಧನೆಯಾಗಿದೆ ಎಂದು ಕಂಪನಿ ತಿಳಿಸಿದೆ.

‘ಕಂಪನಿ, ಪೂರೈಕೆದಾರರು ಮತ್ತು ವಿತರಕರ ದೃಷ್ಟಿಯಿಂದ ಅತಿದೊಡ್ಡ ಸಾಧನೆ ಇದಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆನೆಚಿ ಅಯುಕವಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.