ADVERTISEMENT

2.5 ಕೋಟಿ ವಾಹನ ಮಾರಾಟ ಮಾಡಿದ ಮಾರುತಿ ಸುಜುಕಿ

ಪಿಟಿಐ
Published 30 ಜನವರಿ 2023, 16:08 IST
Last Updated 30 ಜನವರಿ 2023, 16:08 IST
   

ನವದೆಹಲಿ/ಟೋಕಿಯೊ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಭಾರತದಲ್ಲಿ ಒಟ್ಟು 2.5 ಕೋಟಿ ವಾಹನಗಳನ್ನು ಮಾರಾಟ ಮಾಡಿದ ಮೈಲಿಗಲ್ಲನ್ನು ಜನವರಿ 9ರಂದು ಕ್ರಮಿಸಿದೆ ಎಂದು ಸುಜುಕಿ ಮೋಟರ್ ಕಾರ್ಪೊರೇಷನ್ ತಿಳಿಸಿದೆ.

ಸುಜುಕಿ ಕಂಪನಿಯು ಮಾರುತಿ ಉದ್ಯೋಗ್‌ ಜೊತೆ ಪಾಲುದಾರಿಕೆಯೊಂದಿಗೆ 1983ರ ಡಿಸೆಂಬರ್‌ನಲ್ಲಿ ತನ್ನ ಮೊದಲ ಕಾರು (ಮಾರುತಿ 800) ಬಿಡುಗಡೆ ಮಾಡಿತ್ತು. ಈಗ ಮಾರುತಿ ಸುಜುಕಿ ಕಂಪನಿಯು 17 ಮಾದರಿಯ ಕಾರುಗಳನ್ನು ದೇಶದಲ್ಲಿ ತಯಾರಿಸಿ, ಮಾರಾಟ ಮಾಡುತ್ತಿದೆ.

ಕಂಪನಿಯು ಒಂದು ಕೋಟಿ ಕಾರುಗಳನ್ನು ಮಾರಾಟ ಮಾಡಿದ ಮೈಲಿಗಲ್ಲನ್ನು 2012ರ ಫೆಬ್ರುವರಿಯಲ್ಲಿ ದಾಟಿತ್ತು, 2 ಕೋಟಿ ಕಾರುಗಳನ್ನು ಮಾರಾಟ ಮಾಡಿದ ಮೈಲಿಗಲ್ಲನ್ನು 2019ರಲ್ಲಿ ಕ್ರಮಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.