ADVERTISEMENT

Maruti Suzuki profit: ಮಾರುತಿ ಸುಜುಕಿಗೆ ₹3,792 ಕೋಟಿ ಲಾಭ

ಪಿಟಿಐ
Published 31 ಜುಲೈ 2025, 13:09 IST
Last Updated 31 ಜುಲೈ 2025, 13:09 IST
ಮಾರುತಿ ಸುಜುಕಿ
ಮಾರುತಿ ಸುಜುಕಿ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಇಂಡಿಯಾ ₹3,792 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹3,760 ಕೋಟಿ ಲಾಭ ಗಳಿಸಿತ್ತು. ವಾಹನಗಳ ರಫ್ತು ಹೆಚ್ಚಳದಿಂದ ಲಾಭದ ಪ್ರಮಾಣದಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದು ಕಂಪನಿ ಗುರುವಾರ ಷೇರುಪೇಟೆಗೆ ತಿಳಿಸಿದೆ. 

ಒಟ್ಟು ವರಮಾನವು ₹40,493 ಕೋಟಿಯಾಗಿದೆ. ಕಳೆದ ಬಾರಿ ಇದು ₹36,840 ಕೋಟಿಯಷ್ಟಿತ್ತು.

ADVERTISEMENT

ದೇಶೀಯವಾಗಿ ವಾಹನಗಳ ಮಾರಾಟ ಶೇ 4.5ರಷ್ಟು ಕಡಿಮೆಯಾಗಿದ್ದರೆ, ರಫ್ತು ಶೇ 37ರಷ್ಟು ಹೆಚ್ಚಳವಾಗಿದೆ. ಕಂಪನಿಯು ಒಟ್ಟು 5,27,861 ವಾಹನಗಳನ್ನು ಮಾರಾಟ ಮಾಡಿದೆ. ಈ ಪೈಕಿ 4,30,889 ವಾಹನಗಳು ದೇಶೀಯವಾಗಿ ಮಾರಾಟವಾಗಿದ್ದರೆ, 96,972 ವಾಹನಗಳು ರಫ್ತಾಗಿವೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.