ADVERTISEMENT

ಕಲಬೆರಕೆ ಇಂಧನದಿಂದ ಎಂಜಿನ್‌ ಹಾನಿ ದುರಸ್ತಿಗೆ ‘ಸಿಸಿಪಿ’: ಮಾರುತಿ

ಪಿಟಿಐ
Published 16 ಮಾರ್ಚ್ 2022, 11:35 IST
Last Updated 16 ಮಾರ್ಚ್ 2022, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ವಾಹನ ಮಾರಾಟದ ನಂತರದ ಸೇವೆಯನ್ನು ಇನ್ನಷ್ಟು ಬಲಪಡಿಸಲು ‘ಕಸ್ಟಮರ್‌ ಕನ್ವೀನಿಯನ್ಸ್‌ ಪ್ಯಾಕೇಜ್‌’ (ಸಿಸಿಪಿ) ಆರಂಭಿಸಿದೆ. ಈ ಪ್ಯಾಕೇಜ್‌ ಪಡೆಯಲು ಗ್ರಾಹಕರು ಶುಲ್ಕ ಪಾವತಿಸಬೇಕು. ಆಲ್ಟೊ ಮತ್ತು ವ್ಯಾಗನ್‌ ಆರ್‌ ವಾಹನ ಆದರೆ ₹ 500 ಪಾವತಿಸಬೇಕಾಗುತ್ತದೆ.

ಕಲಬೆರಕೆ ಇಂಧನದಿಂದಾಗಿ ಕಾರಿನ ಎಂಜಿನ್‌ ಸೀಜ್‌ ಆದಲ್ಲಿ ಅಂತಹ ವಾಹನವನ್ನು ಕಂಪನಿಯ ಸರ್ವಿಸ್‌ ಸ್ಟೇಷನ್‌ಗೆ ತಂದರೆ ಯಾವುದೇ ಪ್ರಶ್ನೆ ಮಾಡದೆ ಅದನ್ನು ಸರಿಪಡಿಸಲಾಗುವುದು ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಪಾರ್ಥೋ ಬ್ಯಾನರ್ಜಿ ತಿಳಿಸಿದ್ದಾರೆ.

ಅತಿಯಾದ ಮಳೆಯಿಂದಾಗಿ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವುದರಿಂದ ವಾಹನಗಳ ಎಂಜಿನ್‌ಗೆ ನೀರು ನುಗ್ಗಿ ಎಂಜಿನ್‌ಗೆ ಸೀಜ್‌ ಆಗಿದೆ ಎಂದು ಗ್ರಾಹಕರು ಕರೆ ಮಾಡುತ್ತಿರುತ್ತಾರೆ. ಅಲ್ಲದೆ, ಕಲಬೆರಕೆ ಇಂಧನದಿಂದಾಗಿ ಎಂಜಿನ್‌ಗೆ ಹಾನಿ ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರಿಗೆ ನೆರವಾಲು ‘ಸಿಸಿಪಿ’ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.