ADVERTISEMENT

ಮಾರುತಿ ಸುಜುಕಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ₹7 ಸಾವಿರ ಕೋಟಿ ಬಂಡವಾಳ ಹೂಡಿಕೆ

ಪಿಟಿಐ
Published 4 ನವೆಂಬರ್ 2022, 11:21 IST
Last Updated 4 ನವೆಂಬರ್ 2022, 11:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ವಹಿವಾಟು ವಿಸ್ತರಣೆಯ ಭಾಗವಾಗಿ ₹ 7 ಸಾವಿರ ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಲು ಯೋಜಿಸಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಅಜಯ್‌ ಸೇಠ್‌ ತಿಳಿಸಿದ್ದಾರೆ.

ಹೊಸ ಮಾದರಿಗಳ ಬಿಡುಗಡೆ ಮತ್ತು ಹರಿಯಾಣದಲ್ಲಿ ಹೊಸ ಘಟಕ ಸ್ಥಾಪನೆಗೆ ಹೂಡಿಕೆಯ ಹೆಚ್ಚಿನ ಪಾಲು ಬಳಸಲಾಗುವುದು ಎಂದು ಅವರು ಹೇಳಿದ್ದಾರೆ.

ಹರಿಯಾಣದ ಖಾರ್ಖೋಡದಲ್ಲಿ ಹೊಸ ಘಟಕ ನಿರ್ಮಾಣ ಕಾರ್ಯವು ಈಗಾಗಲೇ ಆರಂಭ ಆಗಿದೆ. 2025ರ ವೇಳೆಗೆ ಅದು ಕಾರ್ಯಾಚರಣೆಗೆ ಸಿದ್ಧವಾಗಲಿದ್ದು, ಮೊದಲ ಹಂತದಲ್ಲಿ ವಾರ್ಷಿಕ 2.5 ಲಕ್ಷ ವಾಹನಗಳನ್ನು ತಯಾರಿಸಲಿದೆ ಎಂದು ಅಜಯ್‌ ಮಾಹಿತಿ ನೀಡಿದ್ದಾರೆ.

ADVERTISEMENT

ಸದ್ಯ ಗುರುಗ್ರಾಮ ಮತ್ತು ಮಾನೇಸರ್‌ನ ಒಟ್ಟು ವಾಹನ ತಯಾರಿಕಾ ಸಾಮರ್ಥ್ಯ ವಾರ್ಷಿಕ 15.5 ಲಕ್ಷ ಇದ್ದು, ಮಾತೃಸಂಸ್ಥೆ ಸುಜುಕಿ ಮೋಟರ್ಸ್‌ನ ಗುಜರಾತ್‌ ಘಟಕದ ಸಾಮರ್ಥ್ಯವನ್ನೂ ಪರಿಗಣಿಸಿದರೆ ವಾರ್ಷಿಕ ಸಾಮರ್ಥ್ಯವು 22 ಲಕ್ಷ ದಾಟಲಿದೆ.

ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಇನ್ನಿತರ ನಿರ್ವಹಣಾ ಕೆಲಸಗಳಿಗೂ ಬಂಡವಾಳ ಬಳಸಿಕೊಳ್ಳಲಾಗುವುದು ಎಂದು ಸೇಠ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.