ADVERTISEMENT

ಜನವರಿಯಿಂದ ಮಾರುತಿ ಸುಜುಕಿ ಬೆಲೆ ಏರಿಕೆ

ಪಿಟಿಐ
Published 5 ಡಿಸೆಂಬರ್ 2018, 20:21 IST
Last Updated 5 ಡಿಸೆಂಬರ್ 2018, 20:21 IST
home
home   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿ ಜನವರಿಯಿಂದ ಎಲ್ಲಾ ಮಾದರಿಗಳ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಹೇಳಿದೆ.

ಆದರೆ ಬೆಲೆ ಏರಿಕೆ ಪ್ರಮಾಣವನ್ನು ನಿಗದಿಪಡಿಸಿಲ್ಲ. ಮಾದರಿಗಳನ್ನು ಆಧರಿಸಿ ಬೆಲೆ ಏರಿಕೆ ನಿರ್ಧಾರವಾಗಲಿದೆ ಎಂದು ತಿಳಿಸಿದೆ.

ತಯಾರಿಕಾ ವೆಚ್ಚ ಹೆಚ್ಚಳ ಮತ್ತು ವಿದೇಶಿ ವಿನಿಮಯ ದರದಲ್ಲಿ ಏರಿಕೆ ಆಗಿರುವುದರಿಂದ ಬೆಲೆ ಏರಿಕೆಗೆ ನಿರ್ಧರಿಸಲಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಸದ್ಯ, ಕಂಪನಿಯು ₹ 2.53 ಲಕ್ಷದಿಂದ ₹ 11.45 ಲಕ್ಷದವರೆಗಿನ ಬೆಲೆಯ ವಾಹನಗಳನ್ನು ಮಾರಾಟ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.