
Maruti Suzuki Q3 profit up 4 pc at Rs 3,879 cr
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ₹3,879 ಕೋಟಿ ನಿವ್ವಳ ಲಾಭ ಗಳಿಸಿದೆ.
ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹3,727 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 4ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿ ಬುಧವಾರ ಷೇರುಪೇಟೆಗೆ ತಿಳಿಸಿದೆ.
ಕಂಪನಿಯ ಒಟ್ಟು ವರಮಾನವು ಈ ಅವಧಿಯಲ್ಲಿ ₹38,764 ಕೋಟಿಯಿಂದ ₹49,904 ಕೋಟಿಗೆ ಏರಿಕೆಯಾಗಿದೆ.
2024ರ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ 4.66 ಲಕ್ಷ ವಾಹನಗಳು ದೇಶೀಯವಾಗಿ ಮಾರಾಟವಾಗಿದ್ದವು. ಈ ಬಾರಿ 5.64 ಲಕ್ಷ ವಾಹನಗಳು ಮಾರಾಟ ಆಗಿದೆ. ಇದು ಕಂಪನಿಯ ಅತಿ ಹೆಚ್ಚು ವಾಹನ ಮಾರಾಟವಾದ ತ್ರೈಮಾಸಿಕವಾಗಿದೆ.
ಕಂಪನಿಯು ಒಟ್ಟು 6.67 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಈ ಪೈಕಿ 1.03 ಲಕ್ಷ ವಾಹನಗಳು ರಫ್ತಾಗಿವೆ ಎಂದು ತಿಳಿಸಿದೆ. ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಕಂಪನಿಯ 17.46 ಲಕ್ಷ ವಾಹನಗಳು ಮಾರಾಟವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.