ನವದೆಹಲಿ: ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಹೊಸ ‘ವಿಕ್ಟೊರಿಸ್’ ಎಸ್‌ಯುವಿ ವಾಹನ ಅನಾವರಣ ಮಾಡಿದೆ.
ಕಂಪನಿಯು ಫ್ರಾಂಕ್ಸ್, ಬ್ರೆಜಾ, ಜಿಮ್ನಿ ಮತ್ತು ಗ್ರ್ಯಾಂಡ್ ವಿಟಾರಾ ಮಾದರಿಯ ಎಸ್‌ಯುವಿ ಶ್ರೇಣಿಯ ವಾಹನಗಳನ್ನು ದೇಶೀ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟ ಮಾಡುತ್ತಿದೆ.
‘ವಿಕ್ಟೊರಿಸ್’ ಎಲ್2 ಅಡ್ವಾನ್ಸ್ಡ್ ಡ್ರೈವಿಂಗ್ ಅಸಿಸ್ಟನ್ಸ್ ಸಿಸ್ಟಮ್ (ಎಡಿಎಎಸ್) ಹೊಂದಿದ ಮೊದಲ ಕಾರು ಆಗಿದೆ. ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ವಾರ್ನಿಂಗ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳಿವೆ. ಇದು ಹೈಬ್ರೀಡ್ ಮತ್ತು ಸಿಎನ್‌ಜಿ ಆಯ್ಕೆ ಹೊಂದಿದೆ ಎಂದು ಕಂಪನಿ ಬುಧವಾರ ತಿಳಿಸಿದೆ.
‘ವಿಕ್ಟೊರಿಸ್’ ಬೆಲೆಯನ್ನು ಕಂಪನಿ ಬಹಿರಂಗಪಡಿಸಿಲ್ಲ. ಈ ಮಾದರಿಯ ವಾಹನಗಳನ್ನು ಹರಿಯಾಣದ ಖಾರ್ಖೋಡಾ ಘಟಕದಲ್ಲಿ ತಯಾರಿಸುತ್ತಿದೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.